Saturday, July 2, 2022

Latest Posts

ಪಪಾಯ ಹಣ್ಣು ತಿಂದಿಲ್ಲಾ ಅಂದ್ರೂ ಪರವಾಗಿಲ್ಲ ಪಪಾಯ ಎಲೆ ಬಿಡಬೇಡಿ.. ಅದನ್ಯಾಕೆ ತಿನ್ಬೇಕು? ಇಲ್ಲಿದೆ ಮಾಹಿತಿ..

ಪಪಾಯ ಹಣ್ಣು ಯಾರಿಗಿಷ್ಟ ಇಲ್ಲ? ಚೆನ್ನಾಗಿ ಹಣ್ಣಾಗಿ, ಸಿಹಿ ಇದ್ದು, ಮಧ್ಯೆ ಬೀಜಗಳು ಸಿಗದೇ ಹೋದ್ರೆ ಎಲ್ಲರಿಗೂ ಇಷ್ಟ. ಅದೇ ಸಪ್ಪೆ ಇದ್ದು, ಚಿಕ್ಕ ಬೀಜಗಳು ಮಧ್ಯೆ ಸಿಕ್ಕರೆ ಪಪಾಯದ ಮೇಲೆ ಬೇಸರ ಬಂದುಬಿಡುತ್ತದೆ. ಆದರೆ ಪಪಾಯದಲ್ಲಿ ಬಹಳಷ್ಟು ಒಳ್ಳೆ ಗುಣಗಳಿವೆ. ಅದಕ್ಕಿಂತಲೂ ಒಳ್ಳೆಯ ಗುಣಗಳಿರುವ ಇನ್ನೊಂದು ವಸ್ತು ಇದೆ. ಯಾವುದು ಅಂತೀರಾ ಅದು ಪಪಾಯ ಎಲೆ. ಪಪಾಯ ಎಲೆಯ ರಸದಿಂದ ಆಗುವ ಲಾಭಗಳನ್ನು ಕೇಳಿ..

  • ಡೆಂಗ್ಯೂ ಜ್ವರ: ಡೆಂಗ್ಯೂ ಜ್ವರ ಬಂದಾಗ ಪಪಾಯ ಎಲೆಯ ರಸ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ತಲೆನೋವು, ವಾಂತಿ ಬರುವಂತೆ ಆಗುವುದು, ಮೈ ಕೈಯಲ್ಲಿ ರ‍್ಯಾಶಸ್ ಎಲ್ಲವೂ ಕಡಿಮೆ ಆಗುತ್ತದೆ.
  • ಬಿಳಿ ರಕ್ತ ಕಣ: ಬಿಳಿ ರಕ್ತ ಕಣಗಳು ಕಡಿಮೆಯಾಗಿ ವೀಕ್‌ನೆಸ್ ಆದರೆ, ರೋಗ ನಿರೋಧಕ ಶಕ್ತಿ ಕಡಿಮೆ ಆದರೆ ಪಪಾಯ ಎಲೆಯ ಜ್ಯೂಸ್ ಕುಡಿಯಬೇಕು. ಇದರಿಂದ ಬಿಳಿ ರಕ್ತ ಕಣಗಳು ವೃದ್ಧಿಯಾಗುತ್ತವೆ.
  • ಜೀರ್ಣಕ್ರಿಯೆ ವೃದ್ಧಿ: ಗ್ಯಾಸ್,ಹೊಟ್ಟೆ ಉಬ್ಬರ, ಎದೆಉರಿ ಈ ರೀತಿ ಸಮಸ್ಯೆಗಳಿದ್ದರೆ ಪಪಾಯ ರಸ ಬಳಸಬಹುದು. ಇದು ಜೀರ್ಣಕ್ರಿಯೆ ಸಂಬಂಧಿಸಿದ ರೋಗಗಳಿಗೆ ರಾಮಬಾಣ.
  • ಕೂದಲ ಬೆಳವಣಿಗೆ: ಕೂದಲು ಉದುರುವುದು, ಬೆಳೆಯದೇ ಇರುವುದು ಇಂಥ ಸಮಸ್ಯೆಗಳಿದ್ದರೆ ಪಪಾಯ ರಸ ಹಚ್ಚಬಹುದು.

 

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss