Monday, July 4, 2022

Latest Posts

ಪರಪ್ಪನ ಅಗ್ರಹಾರ ಸೇರಿದ ನಟಿ ರಾಗಿಣಿಗೆ ವಿಚಾರಣಾಧೀನ ಕೈದಿ ನಂ.6604!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ದ್ವಿವೇದಿ ಈಗ ವಿಚಾರಣಾಧೀನ ಕೈದಿ ನಂ.6604 ನೀಡಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ 6 ದಿನಗಳ ಕಾಲ ಸಿಸಿಬಿ ವಶದಲ್ಲಿದ್ದ ರಾಗಿಣಿ ಅವರನ್ನು ಇಂದು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಯಿತು.
ಜೈಲಿಗೆ ಕಾಲಿಟ್ಟ ತಕ್ಷಣ ಪ್ರತಿ ಆರೋಪಿಗೂ ಪ್ರತ್ಯೇಕವಾದ ವಿಚಾರಣಾಧೀನ ಕೈದಿ ನಂಬರ್ ನೀಡಲಾಗುತ್ತೆ. ಇಲ್ಲಿ ಸ್ಟಾರ್ ನಟಿ ಎಂಬ ಕಾರಣಕ್ಕೆ ಆವುದೇ ಆತಿಥ್ಯ ನೀಡಲಾಗುವುದಿಲ್ಲ. ಸಾಮಾನ್ಯ ಕೈದಿಯಂತೆ ನಟಿ ರಾಗಿಣಿ ಆ್ಯಂಡ್ ಟೀಮ್ ಜೈಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಹಿಳಾ ಬ್ಯಾರಕ್​ನಲ್ಲಿ​ ನಲ್ಲಿ ನಟಿ ರಾಗಿಣಿ ತಂಗಲಿದ್ದಾರೆ. ಹಾಗೆಯೇ ಇನ್ನುಳಿದ ಆರೋಪಿಗಳನ್ನು ಪುರಷರ ಬ್ಯಾರಕ್​ನಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ.
ಸಂಜೆ 7 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರಾಗಿಣಿ ಹಾಗೂ ಇತರೆ ಮೂವರನ್ನು ಒಂದೇ ವಾಹನದಲ್ಲಿ ಕರೆತರಲಾಗಿದ್ದು, ಈ ವೇಳೆ ರಾಗಿಣಿ ತಮ್ಮ ಹಾಗೂ ತಂದೆಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
ರಾಗಿಣಿ ಜೈಲು ಸೇರಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಪೊಲೀಸ್ ಬಿಗಿಭದ್ರತೆ ಹೆಚ್ಚಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss