ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಮಹಿಳೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ನಿವಾಸಿ 45 ವರ್ಷದ ಮಹಿಳೆ ಮೃತಪಟ್ಟವರು. 23 ವರ್ಷದ ಪ್ರವೀಣ್ ಎಂಬಾತನ ಮನೆಯಲ್ಲಿಯೇ ಮೃತದೇಹ ಸಿಕ್ಕಿರುವುದು. ಸೋಮವಾರ ಆಕೆಯನ್ನು ಮನೆಗೆ ಕರೆಸಿ ಆರೋಪಿ ಅತ್ಯಾಚಾರ ಎಸಗಿ ಕೊಲೆ ಮಾಡಿ, ನಂತರ ಗೋವಾಕ್ಕೆ ಪರಾರಿಯಾಗಿದ್ದ.
ಸೋಮವಾರ ಕೆಲಸಕ್ಕೆ ತೆರಳಿದ್ದ ಮಹಿಳೆ ರಾತ್ರಿ ಮನೆಗೆ ಬರುವುದಾಗಿ ಪತಿಗೆ ಕರೆ ಮಾಡಿ ತಿಳಿಸಿದ್ದಳು. ಆದರೆ ತಡರಾತ್ರಿಯವರೆಗೂ ಮನೆಗೆ ಬರದಿದ್ದಾಗ ಪತಿ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಮರುದಿನ ಪ್ರವೀಣ್ ಕುಮಾರ್ ಮನೆಯಲ್ಲಿ ಮಹಿಳೆಯೊಬ್ಬರ ಮೃತದೇಹ ಕಂಡು ಬಂದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಹೋಗಿ ಪರಿಶೀಲಿಸಿ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರವೀಣ್ ಕುಮಾರ್’ನ್ನು ಗೋವಾ ಪೊಲೀಸರ ಸಹಾಯದೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.