ಬದಿಯಡ್ಕ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಮದರು ಮಾತೆ ಮೊಗೇರ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಉಪ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು.
ಹಿರಿಯ ನೇತಾರ ಆನಂದ ಕೆ.ಮವ್ವಾರು ಉದ್ಘಾಟಿಸಿದರು. ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದರು. ಡಿ.ಶಂಕರ, ರಾಮಪ್ಪ ಮಂಜೇಶ್ವರ, ರಾಮ ಪಟ್ಟಾಜೆ, ಡಿ.ಗೋಪಾಲ, ಸುರೇಶ್ ಅಜಕ್ಕೋಡು, ಸುಧಾಕರ ಬೆಳ್ಳಿಗೆ ಉಪಸ್ಥಿತರಿದ್ದರು.