Monday, August 15, 2022

Latest Posts

ಪರಿಷ್ಕೃತ ಭೂಪಟಕ್ಕೆ ನೇಪಾಳ ವಿಪಕ್ಷ ಬೆಂಬಲ: ನೇಪಾಳ ಸಂಸತ್‌ನಲ್ಲಿ ವಿವಾದಿತ ಬಿಲ್

ಕಾಟ್ಮಂಡು: ಭಾರತ ಆಕ್ಷೇಪ ಎತ್ತಿರುವ ಮೂರು ವಿವಾದಿತ ಪ್ರಾಂತ್ಯಗಳನ್ನು ಸೇರಿಸಿ ರೂಪಿಸಲಾದ ಭೂಪಟಕ್ಕೆ ಸಹಮತ ವ್ಯಕ್ತಪಡಿಸಿ ನೇಪಾಳದ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮಂಡಿಸಲಾಗಿದೆ.
ಭಾನುವಾರದಂದು ಈ ವಿಧೇಯಕವನ್ನು ನೇಪಾಳದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಮಂತ್ರಿ ಶಿವಮಾಯ ತುಂಬಗ್ಬೆ ಸಂಸತ್ತಿನಲ್ಲಿ ಮಂಡಿಸಿದರು. ಈ ವಿಧೇಯಕಕ್ಕೆ ನೇಪಾಳ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಭಾರತದ ಭಾಗಗಳೆಂದೇ ಗುರುತಿಸಲಾದ ಲಿಪುಲೇಕ್, ಕಾಲಾಪಾನಿ ಹಾಗೂ ಲಿಂಪಿಯಾದುರ, ಈ ಪ್ರಾಂತ್ಯಗಳನ್ನು ನೇಪಾಳವೀಗ ತನ್ನದೆಂದು ಸ್ವಯಂ ಘೋಷಿಸಿಕೊಂಡಿದೆ. ಅಂತಾರಾಷ್ಟ್ರೀಯ ನಿಯಮಾವಳಿ ಹಾಗೂ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಭಾರತ ಈಗಾಗಲೇ ತನ್ನ ಆ ಕ್ರೋಶ ವ್ಯಕ್ತಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss