ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ಪರಿಸರ ಸಂರಕ್ಷಣೆಯಲ್ಲಿ ನಾಡಿಗೇ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕ ಇನ್ನು ಡಾ. ಸಾಲುಮರದ ತಿಮ್ಮಕ್ಕ!
ಶನಿವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವತಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಕಲಬುರ್ಗಿಯ ತಿಮ್ಮಕ್ಕ ಅವರ ನಿವಾಸಕ್ಕೆ ತೆರಳಿದ ವಿಶ್ವವಿದ್ಯಾನಿಲಯದ ಪದಾಧಿಕಾರಿಗಳು ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದಾರೆ.
ನೀವೆಲ್ಲರೂ ಕೂಡಾ ಮರ ಬೆಳೆಸಿ
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ತಿಮ್ಮಕ್ಕ, ಸಂಶೋಧಕರಿಗೆ ಸೇರಿದಂತೆ ಸಾಹಿತಿಗಳಿಗೆ ನೀಡುವ ಈ ಪುರಸ್ಕಾರವನ್ನು ನನಗೂ ನೀಡಿದ್ದು ಸಂತೋಷವಾಗಿದೆ. ನೀವೆಲ್ಲರೂ ಕೂಡಾ ಮರ ಬೆಳೆಸಿದರೆ ನನಗೆ ಇದಕ್ಕಿಂದ ಖುಷಿ ಬೇರೊಂದಿಲ್ಲ ಎಂದರು.
ಈ ಸಂದರ್ಭ ವಿವಿ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ, ಭಾಷಾ ವಿಜ್ಞಾನಿ ಪ್ರೊ. ರಾಜೇಶ್ವರಿ ಮಹೇಶ್ವರಯ್ಯ, ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ.ಬಸವರಾಜ ಡೋಣೂರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಕ್ರಮ ವಿಸಾಜಿ, ಕ್ಲಾಸಿಕಲ್ ಕನ್ನಡದ ನಿರ್ದೇಶಕ ಪ್ರೊ. ಬಿ.ಬಿ. ಪೂಜಾರಿ, ಸಹಾಯಕ ಕುಲಸಚಿವ ಅಜೀಂ ಭಾಷಾ ಉಪಸ್ಥಿತರಿದ್ದರು.
ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಅವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗಿದೆ.