ಹೊಸದಿಗಂತ ವರದಿ ಮಡಿಕೇರಿ:
ಪಲ್ಟಿಯಾಗಿ ಕೆರೆಗೆ ಕಾರು ಬಿದ್ದಿದ್ದು, ತಾಯಿ ಮಗಳು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ಸುಂಟಿಕೊಪ್ಪ ಸಮೀಪದ ಬಾಳೆಕಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಮಡಿಕೇರಿಯ ಅರಣ್ಯ ಭವನದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿರುವ ಕುಶಾಲನಗರ ನಿವಾಸಿ ವೆಂಕಟೇಶ್ ಅವರ ಪತ್ನಿ ಬಬಿತಾ ಹಾಗೂ ಪುತ್ರಿ ಪಲ್ಲವಿ ಎಂದು ಗುರುತಿಸಲಾಗಿದೆ.
ವೆಂಕಟೇಶ್ ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಸಂದರ್ಭ ಹತೋಟಿ ತಪ್ಪಿದ ಕಾರು ಬಾಳೆಕಾಡು ಬಳಿ ರಸ್ತೆ ಬದಿಯಲ್ಲಿರುವ ಕೆರೆಗರ ಮಗುಚಿದೆ.
ಈ ಸಂದರ್ಭ ವೆಂಕಟೇಶ ಅವರು ಈಜಿ ದಡ ಸೇರಿದರೆ, ಕೆರೆಯೊಳಗೆ ಕಾರಿನಲ್ಲಿ ಸಿಲುಕಿದ್ದ
ಪತ್ನಿ ಮತ್ತು ಮಗಳು ಸಾವಿಗೀಡಾಗಿದ್ದಾರೆ. ಕ್ರೇನ್ ಬಳಸಿ ರಾತ್ರಿಯೇ ಕಾರನ್ನು ಮೇಲಕ್ಕೆತ್ತಿ
ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.