Thursday, August 11, 2022

Latest Posts

ಪಾಂಡವಪುರ| ನಿಷೇಧಿತ ಪ್ರದೇಶದಲ್ಲಿ ಕಳ್ಳತನದಿಂದ ಕಲ್ಲು ಗಣಿಗಾರಿಕೆ: ಪ್ರಕರಣ ದಾಖಲು

ಪಾಂಡವಪುರ : ಕೆಆರ್‍ಎಸ್ ಜಲಾಶಯ ವ್ಯಾಪ್ತಿಯ ತಾಲೂಕಿನ ಕಾವೇರಿಪುರ ಗ್ರಾಮದ ನಿಷೇಧಿತ ಪ್ರದೇಶದಲ್ಲಿ ಕಳ್ಳತನದಿಂದ ಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಗಳಿಬ್ಬರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಕೆಆರ್‍ಎಸ್ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಸ್.ಬಿ.ನವೀನಗೌಡ ಅವರು ಎರಡು ಕಂಪ್ರೆಸರ್ ಟ್ರಾಕ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಾವೇರಿಪುರ ಗ್ರಾಮದ ಸರ್ಕಾರಿ ಕ್ವಾರೆಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕಂಪ್ರೆಸರ್ ಟ್ರಾಕ್ಟರ್‍ಗಳಲ್ಲಿ ಕುಳಿಗಳ ಮೂಲಕ ಕಲ್ಲುಗಳನ್ನು ಹೊಡೆದು ಕಳ್ಳತನದಿಂದ ಕಲ್ಲು ಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯನ್ನು ಆಧರಿಸಿ ಕೆಆರ್‍ಎಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಎಸ್.ಬಿ.ನವೀನ್‍ಗೌಡ ಮತ್ತವರ ಸಿಬ್ಬಂದಿಗಳಾದ ತೌಷಿಪ್, ಮಂಜುನಾಥ್, ಲೋಕೇಶ್ ಹಾಗೂ ಇತರರೊಡನೆ ದಾಳಿ ನಡೆಸಿದ ವೇಳೆ ಆರೋಪಿತರು ಕಂಪ್ರೆಸರ್ ಟ್ರಾಕ್ಟರ್‍ಗಳಲ್ಲಿ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‍ಎಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಎಸ್.ಬಿ.ನವೀನ್‍ಗೌಡ ಅವರು, ಅಕ್ರಮ ಕಲ್ಲು ಗಣಿಗಾರಿಕೆ ಬಳಸಿದ್ದ ಎರಡು ಕಂಪ್ರೆಸರ್ ಟ್ರಾಕ್ಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss