Monday, August 8, 2022

Latest Posts

ಪಾಂಡವಪುರ| ಹೇಮಾವತಿ ನಾಲೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು

ಪಾಂಡವಪುರ: ಈಜಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಮೇಲುಕೋಟೆ ಸಮೀಪದ ಹೊಸಹಳ್ಳಿ ಗ್ರಾಮದ ಹೇಮಾವತಿ ನಾಲೆಯಲ್ಲಿ ಶುಕ್ರವಾರ ನಡೆದಿದೆ.
ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣೇಗೌಡ ಅವರ ಪುತ್ರ ಶಶಾಂಕ್‍ಗೌಡ (20) ಮೃತ ಯುವಕ. ಮೇಲುಕೋಟೆ ಸಮೀಪವಿರುವ ಉಳಿಗೆರೆ ಬಳಿ ಇರುವ ತಮ್ಮ ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಶಶಾಂಕ್ ಸ್ನೇಹಿತರ ಜತೆ ಹೇಮಾವತಿ ನಾಲೆಯಲ್ಲಿ ಈಜಲು ಹೊಗಿದ್ದಾನೆ. ಈತನಿಗೆ ಈಜು ಬಾರದ ಕಾರಣ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಶಶಾಂಕ್‍ಗೌಡನ ಶವವನ್ನು ನಾಲೆಯಿಂದ ಮೇಲೆತ್ತಿದರು. ಮೇಲುಕೋಟೆ ಠಾಣಾ ಪೊಲೀಸರು ತಾಲ್ಲೂಕು ಆಸ್ಪತ್ರೆಯಲ್ಲಿ ಪಂಚನಾಮೆ ನಡೆಸಿದ ಬಳಿಕ ಶವವನ್ನು ವಾರಸುದಾರರಿಗೆ ನೀಡಿದರು. ಈ ಸಂಬಂಧ ಮೇಲುಕೋಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss