Wednesday, July 6, 2022

Latest Posts

ಪಾಕಿಸ್ತಾನಕ್ಕೂ ಲಗ್ಗೆ ಇಟ್ಟ ಯುಕೆ ಹೈಬ್ರೀಡ್ ಕೊರೋನಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬ್ರಿಟನ್ ನ ರೂಪಾಂತರ ಕೊರೋನಾ ವೈರಸ್ ಭಾರತದ ಬಳಿಕ ಪಾಕ್ ಗೂ ಕಾಲಿಟ್ಟಿದ್ದು, ಯುಕೆಯಿಂದ ಹಿಂದಿರುಗಿದ ಪ್ರಯಾಣಿಕರಲ್ಲಿ ಮೂವರಲ್ಲಿ ಹೊಸ ವೈರಸ್ ನ ಲಕ್ಷಣಗಳಿರುವುದು ದೃಢವಾಗಿದೆ ಎಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.
ಯುಕೆ ಹಿಂದಿರುಗಿದ 12 ಜನರ ಮಾದರಿಗಳನ್ನು ಸಿಂಧ್ ಆರೋಗ್ಯ ಇಲಾಖೆಯು ಜಿನೋಟೈಪಿಂಗ್​ ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಆರು ಜನರು ಕೋವಿಡ್ -19 ಸೋಂಕು ಕಂಡು ಬಂದಿತ್ತು. ಇದರಲ್ಲೀಗ ಮೊದಲ ಹಂತದಲ್ಲಿ ಮೂವರಲ್ಲಿ ಹೊಸ ರೂಪಾಂತರ ಕೋವಿಡ್​ ಲಕ್ಷಣಗಳಿವೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಜಿನೋಟೈಪಿಂಗ್ ಪರೀಕ್ಷೆಯ ಮೂಲಕ ಇದು ಹೊಸ ರೂಪಾಂತರ ಕೋವಿಡ್​ಗೆ ಶೇ 95 ಪ್ರತಿಶತದಷ್ಟು ಹೊಂದಾಣಿಕೆಯಾಗುತ್ತಿದೆ ಎಂದು ಬಹಿರಂಗಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss