spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಯುವಕ!

- Advertisement -Nitte

ಹೈದರಾಬಾದ್​: ಮಹಾರಾಷ್ಟ್ರದ ಯುವಕನೊಬ್ಬ ಫೇಸ್​ಬುಕ್​ ಮೂಲಕ ಪರಿಚಯವಾದ ಪಾಕಿಸ್ತಾನದಲ್ಲಿರುವ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ಗಡಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾನೆ.
20 ವರ್ಷದ ಸಿದ್ಧಿಕಿ ಮೊಹಮ್ಮದ್​ ಜಿಸಾನ್ ಫೇಸ್​ಬುಕ್​ ಮೂಲಕ ಪಾಕಿಸ್ತಾನದ ಹುಡುಗಿ ಜತೆ ಪರಿಚಯವಾಗಿದೆ. ಆಕೆಯೊಂದಿಗೆ ವಾಟ್ಸ್​​ಆ್ಯಪ್​​ನಲ್ಲಿ ಪ್ರತಿದಿನ ಚಾಟ್​ ಮಾಡಲು ಶುರು ಮಾಡಿದ್ದಾನೆ. ಇದಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.ಹೀಗಾಗಿ ಆತ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಗೂಗಲ್​ ಮ್ಯಾಪ್​ ಮೂಲಕ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಲು ಯತ್ನಿಸಿದ್ದಾನೆ. ಗುಜರಾತ್​ನ ಕಚ್​​ನ ರಣ್ ಪ್ರದೇಶದಲ್ಲಿ ಬಾರ್ಡರ್​ ಕ್ರಾಸ್​ ಮಾಡ್ತಿದ್ದ ವೇಳೆ ಬಿಎಸ್​ಎಫ್ ಯೋಧರು​​ ಆತನನ್ನು ವಶಕ್ಕೆ ಪಡೆದಿದ್ದಾರೆ . ಈ ವೇಳೆ ಸಂಪೂರ್ಣವಾದ ಮಾಹಿತಿ ನೀಡಿರುವ ಯುವಕ 1200 ಕಿಲೋ ಮೀಟರ್​ ಪ್ರಯಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದಾಗಿ ತಿಳಿಸಿದ್ದಾನೆ. ಈ ವೇಳೆ ಯುವಕನಿಂದ ಎಟಿಎಂ ಕಾರ್ಡ್​, ಆಧಾರ್​ ಕಾರ್ಡ್​ ಸೇರಿದಂತೆ ಇತರೆ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss