Wednesday, June 29, 2022

Latest Posts

ಪಾಕಿಸ್ತಾನದ ಭದ್ರತಾ ನೆಲೆಯ ಮೇಲೆ ಉಗ್ರರ ದಾಳಿ: ನಾಲ್ವರು ಸೈನಿಕರ ಹತ್ಯೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಈಶಾನ್ಯ ಪಾಕಿಸ್ತಾನದ ಬುಡಕಟ್ಟು ಜಿಲ್ಲೆಯಲ್ಲಿದ್ದ ಭದ್ರತಾ ನೆಲೆಯ ಶಿಬಿರಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಸೈನಿಕರು ಸೇರಿದಂತೆ ಹಲವು ದಾಳಿಕೋರರು ಸಾವನ್ನಪ್ಪಿದ್ದಾರೆ.
ಅಫ್ಗಾನಿಸ್ತಾನದ ಗಡಿಭಾಗದ ದಕ್ಷಿಣ ವಾಜಿರಿಸ್ತಾನ್ ಜಿಲ್ಲೆಯಲ್ಲಿರುವ ಮಕೀನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ದಾಳಿಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ನಾಲ್ವರು ಉಗ್ರರು ಸತ್ತಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ. ಖೈಬರ್ ಪಕ್ತುನ್ಕ್ವಾ ಪ್ರಾಂತ್ಯದ ರಾಜ್ಯಪಾಲ ಶಾ ಫರ್ಮಾನ್‌ ಅವರು ದಾಳಿಯನ್ನು ಖಂಡಿಸಿದ್ದಾರೆ. ಇಲ್ಲಿವರೆಗೆ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆಗಳು ಹೊತ್ತಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss