ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯಅಂಗ :  ಸೇನಾ ಮುಖ್ಯಸ್ಥ ಎಂ ನರವಣೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯಅಂಗ :  ಸೇನಾ ಮುಖ್ಯಸ್ಥ ಎಂ ನರವಣೆ.

ನವದೆಹಲಿ:  ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು  ಯಾವುದೇ ಕಾರಣಕ್ಕು ಬಿಟ್ಟುಕೊಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಎಂ ನರವಣೆ ಹೇಳಿದ್ದಾರೆ.

ಸೇನಾ ಮುಖ್ಯಸ್ಥರಾದ ಎಂ.ನರವಣೆ, “ಪಾಕಿಸ್ಯಾನ ಆಕ್ರಮಿತ ಕಾಶ್ಮೀರ ಭಾರತದ ಸ್ವತ್ತು ಮತ್ತು ಭಾರತದ ಅವಿಭಾಜ್ಯ ಅಂಗವಾಗಿದ್ದು. ಸಂಸತ್ತು  ಆದೇಶಿಸಿದರೆ ನಾವು ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು ಸೇನೆ ತೆಗೆದುಕೊಳ್ಳುತ್ತದೆ. ಭಾರತ ಸೇನೆ ಯುದ್ಧ ಮಾಡಲೂ ಸಿದ್ದವಿದೆ ಎಂದರು.”

ಹಿಂದೆ 370ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ ಮಾನಗಳನ್ನು ತೆಗೆದ ನಂತರ ಭಾರತ ಸರ್ಕಾರದ ಕೆಲ ಶಾಸಕರು ತಮ್ಮ ಪ್ರಣಾಳಿಕೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪುನಃ ಪಡೆದುಕೊಳ್ಳುವುದರ ಬಗ್ಗೆಯೂ ಮಾತನಾಡಿದ್ದಾರೆ.

 ಭಾರತದ ವಿದೇಶಾಂಗ ಸಚಿವರಾದ ಎಸ್. ಜಯಶಂಕರ್ ಸೆಪ್ಟೆಂಬರ್ನಲ್ಲಿ “ಪಿಓಕೆ ಭಾರತದ ಸ್ವತ್ತು ಮತ್ತು ಅದನ್ನು ಮುಂದಿನ ದಿನಗಳಲ್ಲಿ ಅದನ್ನು ಭಾರತದ ಸಂವಿಧಾನಿಕ ವ್ಯಾಪ್ತಿಯಲ್ಲಿ ಬರುತ್ತದೆ.” ಎಂದು ಹೇಳಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss