Wednesday, August 17, 2022

Latest Posts

ಪಾಕಿಸ್ತಾನ ಪ್ರಧಾನಿ ಭಾಷಣ ಕೇಳದೆ ವಿಶ್ವಸಂಸ್ಥೆ ಸಭೆಯಿಂದ ಹೊರನಡೆದ ಭಾರತ: ವೈರಲ್ ಆಯಿತು ಈ ವೀಡಿಯೋ…

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ನಡೆಯುತ್ತ 75 ನೇ ಅಧಿವೇಶನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾತು ಕೇಳದೆ ಸಭೆಯಿಂದ ಭಾರತ ಹೊರ ನಡೆದಿದೆ.

ಪಾಕಿಸ್ತಾನ ಪ್ರಧಾನಿ ಮಾತನಾಡಲು ಪ್ರಾರಂಭಿಸಿದ ಬೆನ್ನಲ್ಲೇ ಭಾರತೀಯ ಕಾರ್ಯದರ್ಶಿ ಮಿಜಿಟೊ ವಿನಿಟೋ ಸಭೆಯಿಂದ ಹೊರನಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯ ಖಾಯಂ ಭಾರತದ ಪ್ರತಿನಿಧಿ ಟಿ.ಎಸ್. ತಿರು ಮೂರ್ತಿ, ಭಾರತದ ವಿರುದ್ಧ ಪಾಕಿಸ್ಥಾನದ ಆರೋಪ ಕೇವಲ ವೈಯಕ್ತಿಕ ನಿಂದನೆ ಹಾಗೂ ಕೀಳು ಮಟ್ಟದ ಸುಳ್ಳುಗಳು ಮತ್ತು ಯುದ್ದೋದ್ಮತ.

ಪಾಕಿಸ್ತಾನವು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಭಯೋತ್ಪಾದನೆಯ ಸುಳ್ಳು ವಿಚಾರಗಳನ್ನು ನೀಡುತ್ತಿದೆ. ಇದಕ್ಕೆ ಭಾರತ ತಕ್ಕ ಉತ್ತರ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡುತ್ತಿರುವ ಅವರು, ಭಾರತೀಯ ಕಾರ್ಯದರ್ಶಿ ಮಿಜಿಟೊ ವಿನಿಟೋ ಪಾಕಿಸ್ತಾನಕ್ಕೆ ನೀಡಿದ ಖಡಕ್ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!