ಪಾಕಿಸ್ತಾನದ ಷೇರು ಮಾರುಕಟ್ಟೆಯ ಮೇಲೆ ಉಗ್ರರ ದಾಳಿ: 10 ಮಂದಿ ಸಾವು

0
194

ಇಸ್ಲಾಮಾಬಾದ್: ಸೋಮವಾರ ಬೆಳಗ್ಗೆ ಪಾಕಿಸ್ತಾನದ ಕರಾಚಿಯ ಷೇರು ಮಾರುಕಟ್ಟೆಯಲ್ಲಿ ಉಗ್ರರ ದಾಳಿ ನಡೆದಿದೆ.

ಷೇರು ಮಾರುಕಟ್ಟೆಯ ಬಳಿ ಬಂದ ನಾಲ್ವರು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಗ್ರನೇಡ್ ಎಸೆದ ನಾಲ್ವರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಗ್ರರು ಷೇರು ಮಾರುಕಟ್ಟೆಯ ಮೇಲೆ ಗ್ರನೇಡ್ ಎಸೆದು, ದಾಳಿ ಮಾಡಲು ಮುಂದಾಗಿದ್ದು, ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿ, ಅವರ ಬಳಿ ಇದ್ದ ಎಕೆ-47, ಗ್ರನೇಡ್ ಸೇರಿದಂತೆ ಇತರೆ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here