Tuesday, October 27, 2020
Tuesday, October 27, 2020

Latest Posts

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

ಪಾಕಿಸ್ಥಾನ ಪರ ಕರುಣೆ ತೋರೋರಿಗೆ ನೆನಪಾಗ್ತಿಲ್ವೇ ಗುಲ್ಮಾರ್ಗ್ ಆಪರೇಷನ್?

ಆಮ್‌ಸ್ಟರ್ಡಂ: ೧೯೪೭ರ ಅ.೨೨ ಜಮ್ಮು -ಕಾಶ್ಮೀರ ಪಾಲಿಗೆ ಅತ್ಯಂತ ಕರಾಳ ದಿನ. ಜಮ್ಮು -ಕಾಶ್ಮೀರದ ಮೂಲವಾಸಿಗಳನ್ನೆಲ್ಲ ಬರ್ಬರವಾಗಿ ಕೊಂದು, ಇಡೀ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪಾಕಿಸ್ಥಾನ ನಡೆಸಿದ ಅತ್ಯಂತ ಕ್ರೂರ ಆಪರೇಷನ್ ಗುಲ್ಮಾರ್ಗ್‌ಗೆ ಈಗ ವರುಷ ೭೩ ತುಂಬುತ್ತಿದ್ದರೂ, ಪಾಕಿಸ್ಥಾನದ ಸ್ವಾರ್ಥ-ದುರ್ವರ್ತನೆಗಳಲ್ಲಿ ಮಾತ್ರ ಇನಿತೂ ಬದಲಾವಣೆಯಾಗಿಲ್ಲ. ಪಾಕ್ ಪ್ರಚೋದಿತ ಬುಡಕಟ್ಟು ಲಷ್ಕರಿಗಳು ಜಮ್ಮು -ಕಾಶ್ಮೀರದ ಮೂಲನಿವಾಸಿ ಹಿಂದು, ಸಿಖ್ಖರು ಒಳಗೊಂಡಂತೆ ಸುಮಾರು ೩೫೦೦೦-೪೦ಸಾವಿರ ಮಂದಿಯನ್ನು ನಿರ್ದಯಿಗಳಂತೆ ಕೊಂದು ಹಾಕಿ ನೆತ್ತರ ಹೊಳೆ ಹರಿಸಿದರು. ನಾಡಿನ ಹೆಸರಿನೊಂದಿಗೆ ಗುರುತಿಸಲ್ಪಡುವ ಕಾಶ್ಮೀರಿಗಳ ಮಾನ್ಯತೆಯನ್ನೇ ಮಣ್ಣುಗೂಡಿಸಿದರು. ವಿಶ್ವಸಂಸ್ಥೆ ರೂಪಿಸಿದ ವಾಸ್ತವ ನಿಯಂತ್ರಣ ರೇಖೆಯಿಂದಾಗಿ ಈ ಸಂಪನ್ನ ರಾಜ್ಯ ಮತ್ತು ರಾಜ್ಯದ ಜನತೆ ಚೂರುಚೂರಾಗಿ ಹೋದ ದು:ಸ್ವಪ್ನಸದೃಶ ದಿನಗಳವು ಎಂದು ದಕ್ಷಿಣ ಏಷ್ಯಾ ಅಧ್ಯಯನಗಳಿಗಾಗಿರುವ ಯುರೋಪಿಯನ್ ಪ್ರತಿಷ್ಠಾನ (ಇಎಫ್‌ಎಸ್‌ಎಎಸ್) ವಿಶ್ಲೇಷಿಸಿದೆ.
ಪಾಕಿಸ್ಥಾನದ ಆಗಿನ ಮೇ. ಜ. ಅಕ್ಬರ್ ಖಾನ್ ಮತ್ತು ಪಾಕಿಸ್ಥಾನದ ಸ್ಥಾಪಕ ಮುಹಮ್ಮದಾಲಿ ಜಿನ್ನಾನ ಆಪ್ತ ಶೌಕತ್ ಹಯತ್ ಖಾನ್ ಸೇರಿಕೊಂಡು ಹೀಗೊಂದು ಕ್ರೂರ ಕಾರ್ಯಾಚರಣೆಗೆ ೧೯೪೭ರ ಆಗಸ್ಟ್‌ನಲ್ಲೇ ಸ್ಕೆಚ್ ಹಾಕಿದ್ದರು ಮತ್ತು ಸುಮಾರು ೨೨ ಪಷ್ತೂನ್ ಬುಡಕಟ್ಟು ಲಷ್ಕರಿಗಳು ಈ ಕರಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಗುಲ್ಮಾರ್ಗ್ ಅಥವಾ ಕಾಶ್ಮೀರ ಕಾರ್ಯಾಚರಣೆಯ ಉಸ್ತುವಾರಿ ಹೊಣೆಯನ್ನು ತನಗೆ ವಹಿಸಲಾಗಿತ್ತು ಮತ್ತು ಕಾರ್ಯಾಚರಣೆಗಾಗಿ ಪಾಕಿಸ್ಥಾನದ ಅಂದಿನ ಹಣಕಾಸು ಸಚಿವ ಗುಲಾಂ ಮುಹಮ್ಮದ್ ಖಜಾನೆಯಿಂದ ೩,೦೦,೦೦೦ರೂ.ಗಳನ್ನು ಮಂಜೂರು ಮಾಡಿದ್ದರು ಎಂದು ಶೌಕತ್ ಹಯತ್ ಖಾನ್ ನಂತರದ ದಿನಗಳಲ್ಲಿ ಬರೆದ ‘ದ ನೇಶನ್ ದಟ್ ಲಾಸ್ಟ್ ಇಟ್ಸ್ ಸೋಲ್ ’ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಗುಪ್ತ ಸಂಚಿನಂತೆ, ೧೯೪೭ರ ಅ.೨೨ರಂದು ಗುಲ್ಮಾರ್ಗ್ ಕಾರ್ಯಾಚರಣೆ ನಡೆಸುವುದೆಂದು ನಿರ್ಧರಿಸಲಾಯಿತು. ಜಮ್ಮು -ಕಾಶ್ಮೀರದ ಗಡಿಗೆ ತಾಗಿಕೊಂಡಿರುವ ಅಬೋಟಾಬಾದ್‌ನಲ್ಲಿ ಅ.೧೮ರಂದೇ ಜಮಾಯಿಸುವಂತೆ ಮೇ.ಜ. ಅಕ್ಬರ್ ಖಾನ್ ಲಷ್ಕರಿಗಳಿಗೆ ಆದೇಶಿಸಿದ್ದಾನೆ. ಬೆನ್ನಲ್ಲೇ ಈ ಕಾರ್ಯಾಚರಣೆಗೆಂದೇ ಸಿದ್ಧಮಾಡಿಕೊಂಡ ಪ್ರಯಾಣಿಕ ಬಸ್ ಮತ್ತು ಟ್ರಕ್‌ಗಳಲ್ಲಿ ಬುಡಕಟ್ಟು ದಾಳಿಕೋರರು ರಾತೋರಾತ್ರಿ ಅಬೋಟಾಬಾದ್‌ನತ್ತ ಪಯಣಿಸಿದ್ದರು.
ಆದರೆ ಪಾಕಿಸ್ಥಾನ ಈ ಕಟು ಸತ್ಯವನ್ನು ಮರೆಮಾಚಿದೆ. ಜಮ್ಮುವಿನ ಕೋಮುಗಲಭೆಯಲ್ಲಿ ಮುಸಲ್ಮಾನರನ್ನು ಕೊಲ್ಲಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಜಿಹಾದ್‌ಗಾಗಿ ಬುಡಕಟ್ಟು ದಾಳಿಕೋರರು ಜಮ್ಮು-ಕಾಶ್ಮೀರಕ್ಕೆ ನುಗ್ಗಿದರೆಂದು ಪಾಕ್ ಸುಳ್ಳು ಹೇಳಿದೆ ಎಂದು ಇಎಫ್‌ಎಸ್‌ಎಎಸ್ ಗಮನ ಸೆಳೆದಿದೆ.
ಒಂದೇ ದಿನ ೧೧ಸಾವಿರ ಕಾಶ್ಮೀರಿಗಳ ಹತ್ಯೆ
ಬುಡಕಟ್ಟು ದಾಳಿಕೋರರು ಬಾರಾಮುಲ್ಲಾದಲ್ಲಿ ಅ.೨೬ರಂದು ಒಂದೇ ದಿನ ೧೧,೦೦೦ಮೂಲನಿವಾಸಿಗಳನ್ನು ಕೊಂದು ಹಾಕಿದ್ದರು ಮತ್ತು ಶ್ರೀನಗರಕ್ಕೆ ವಿದ್ಯುತ್ ಪೂರೈಸುವ ಮೋರಾ ಪವರ್ ಸ್ಟೇಷನ್‌ನ್ನು ನಾಶಪಡಿಸಿದ್ದರು.
ಲಷ್ಕರಿಗಳಿಂದ ಸಾವಿರಾರು ಕಾಶ್ಮೀರಿಯರ ಮಾರಣಹೋಮ ಅವ್ಯಾಹತವಾದಾಗ, ಕಾಶ್ಮೀರದ ಆಗಿನ ಮಹಾರಾಜ ಹರಿಸಿಂಗ್ ಭಾರತದ ಮೊರೆ ಹೋದರು. ತುರ್ತು ಮತ್ತು ಕರಾಳ ಸನ್ನಿವೇಶದಲ್ಲಿ ತನ್ನ ರಾಜ್ಯ ಮತ್ತು ರಾಜ್ಯದ ಜನರನ್ನು ಮೃಗೀಯ ಆಕ್ರಮಣಕೋರರ ಹಿಡಿತಕ್ಕೆ ಬಿಟ್ಟು ರಾಜ್ಯ ತೊರೆಯಲು ಮಹಾರಾಜರ ಆತ್ಮಸಾಕ್ಷಿ ಒಪ್ಪಲಿಲ್ಲ. ತನ್ನ ಪ್ರಾಣವಿರುವ ತನಕ ಕಾಶ್ಮೀರವನ್ನು ಪಾಕ್ ಪಾಲಾಗಲು ಬಿಡೆನೆಂದು ಪಣತೊಟ್ಟ ಮಹಾರಾಜ ಹರಿಸಿಂಗ್, ಇಡೀ ಜಮ್ಮು -ಕಾಶ್ಮೀರವನ್ನು ಭಾರತ ಸರಕಾರದ ಅನಕ್ಕೆ ಬಿಟ್ಟುಕೊಡಲು ತೀರ್ಮಾನಿಸಿದರು ಎಂದು ಇಎಫ್‌ಎಸ್‌ಎಎಸ್ ನೆನಪಿಸಿದೆ.
ಜಮ್ಮು -ಕಾಶ್ಮೀರದ ಮುಸಲ್ಮಾನರ ಪರ ಪಾಕ್ ಕಳವಳ ಏನಿದ್ದರೂ ಸುಳ್ಳು ಮತ್ತು ಪೊಳ್ಳು. ಪಾಕ್ ಪರ ಪ್ರಚಾರ ನಿರತರು ಯಾರೇ ಆಗಿರಲಿ, ಜಮ್ಮು -ಕಾಶ್ಮೀರ ಮೇಲೆ ಬಲವಂತವಾಗಿ ಹಿಡಿತ ಸಾಸಲು ಪಾಕಿಸ್ಥಾನ ೧೯೪೭ರ ಅಕ್ಟೋಬರ್‌ನಲ್ಲಿ ನಡೆಸಿದ ಕ್ರೂರ ದಾಳಿಯನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು ಸಂಸ್ಥೆ ಸಲಹೆಯಿತ್ತಿದೆ. ಗುಲ್ಮಾರ್ಗ್ ಆಪರೇಷನ್ ಸಂಚುಕೋರರು ಮತ್ತು ಪ್ರಚೋದಕರು ಕಾಶ್ಮೀರಿಗಳ ಪರಮಶತ್ರುಗಳು ಎಂದು ಇಎಫ್‌ಎಸ್‌ಎಎಸ್ ಎಚ್ಚರಿಸಿದೆ. ಜಮ್ಮು-ಕಾಶ್ಮೀರದ ಅಸ್ತಿತ್ವವನ್ನೇ ಮಣ್ಣುಗೂಡಿಸಿದಂತಹ ದಾಳಿ ಶುರುವಾದ ದಿನವಾದ ೧೯೪೭ ರ ಅ.೨೨ಜಮ್ಮು-ಕಾಶ್ಮೀರದ ಚರಿತ್ರೆಯಲ್ಲೇ ಕಪ್ಪು ದಿನ ಎಂದು ಇಎಫ್‌ಎಸ್‌ಎಎಸ್ ವಿಶ್ಲೇಷಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...

ಗಜಪಡೆಗೆ ಅಭಿನಂದನೆ: ಮಾವುತರು,ಕಾವಾಡಿಗಳಿಗೆ ಗೌರವ ಧನ ವಿತರಣೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ನಡೆಸಿಕೊಟ್ಟಿರುವ ಗಜಪಡೆಯ ನಾಯಕ ಅಭಿಮನ್ಯು ಮತ್ತು ತಂಡಕ್ಕೆ ಮಂಗಳವಾರ ಅರಮನೆಯಲ್ಲಿವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪೂಜೆ ಸಲ್ಲಿಸಿದರು....

Don't Miss

ರಾಮನಗರ: ಈ ಬಾರಿ ಸರಳ ಸಂಭ್ರಮದ ಬನ್ನಿ ಕಾರ್ಯಕ್ರಮ

ರಾಮನಗರ : ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶ್ರೀ ಮಲ್ಲೇಶ್ವರ, ಶ್ರೀ ಮಾರಮ್ಮ ಮತ್ತು ನಂದಿ ಕಂಬದೊಂದಿಗೆ ಹಾಗೂ ಹುಲಿ ವಾಹನದೊಂದಿಗೆ ಸುಮಾರು ಏಳು ಘಂಟೆ ಸಮಯಕ್ಕೆ ದೇವಸ್ಥಾನದಿಂದ ಹೊರಟ ಮೆರವಣಿಗೆ...

ಮೈಸೂರು: ಕುಟುಂಬ ಸಮೇತ ಚಾಮುಂಡೇಶ್ವರಿಯ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ನಾಡ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿಯ ರಥವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದವರೊಂದಿಗೆ ಎಳೆಯುವ ಮೂಲಕ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರು,...

ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆಯಡಿ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ. 18 ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮತ್ತು ಭಯೋತ್ಪಾದಕ ಸಂಘಟನೆಯ...
error: Content is protected !!