ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪದೇ ಪದೇ ಜಮ್ಮು ಕಾಶ್ಮೀರದ ಅಮಾಯಕರ ಮೇಲೆ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಉಗ್ರರ ಲಾಂಚ್ ಪ್ಯಾಡ್ಗಳ ಮೇಲೆ ಭಾರತೀಯ ಸೇನೆ ಇಂದು ಮತ್ತೊಂದು ಮಿಂಚಿನ ದಾಳಿ ನಡೆಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಲಾಂಚ್ ಪ್ಯಾಡ್ಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು ದಾಳಿಯಿಂದಾದ ಪರಿಣಾಮದ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಉಗ್ರರ ಮೂಲಕ ಜಮ್ಮು ಕಾಶ್ಮೀರ ಗಡಿಭಾಗದಲ್ಲಿ ಪಾಕ್ ಪದೇ ಪದೇ ಶಾಂತಿ ಕದಡುವ ಯತ್ನ ನಡೆಸುತ್ತಿದ್ದು, ಭಾರತೀಯ ಸೇನೆ ಸತತವಾಗಿ ತಕ್ಕ ಉತ್ತರ ನೀಡುತ್ತಿದೆ.