ಕರಾಚಿ: ಶುಕ್ರವಾರ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ವಿಮಾನ ದುರಂತದಲ್ಲಿ 97 ಮಂದಿ ಬಲಿಯಾಗಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾಕಿಸ್ತಾನದ ಲಾಹೋರ್ ನಿಂದ ಕರಾಚಿಗೆ ಸಂಚರಿಸುತ್ತಿದ್ದ ಪಿ.8303 ವಿಮಾನ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವ ವೇಳೆ ವಸತಿ ಪ್ರದೇಶಕ್ಕೆ ಅಪ್ಪಳಿಸಿದೆ. ಅಪಘಾತದಲ್ಲಿ 97 ಮಂದಿ ಮೃತಪಟ್ಟಿದ್ದಾರೆ.
ವಿಮಾನದಲ್ಲಿ 107 ಮಂದಿ ಸಂಚರಿಸುತ್ತಿದ್ದರು, ಅವರಲ್ಲಿ 8 ಮಂದಿ ವಿಮಾನ ಸಿಬ್ಬಂದಿ ಹಾಗು 99 ಮಂದಿ ಪ್ರಯಾಣಿಕರಿದ್ದರು.
ತಾಂತ್ರಿಕ ಸಮಸ್ಯೆಯಿಂದ ಕರಾಚಿ ವಿಮಾನ ನಿಲ್ದಾಣದಿಂದ ಸಂಪರ್ಕ ಕಳೆದು ಕೊಂಡ ವಿಮಾನವು ರನ್ ವೇ ಗೆ ಇಳಿಯುತ್ತಿದ್ದ ಸಂದರ್ಭ ದುರಂತ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಬ್ಯಾಂಕ್ ಆಫ್ ಪಂಜಾಬ್ ನ ಸಿಇಒ ಜಾಫರ್ ಮಸೂದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.