Sunday, August 14, 2022

Latest Posts

ಪಾಕ್ ಪಾಪಿ ಕೃತ್ಯಕ್ಕೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ: 8 ಪಾಕಿಸ್ತಾನಿ ಸೈನಿಕರು ಮಟಾಷ್‌

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ-ಪಾಕ್ ಗಡಿನಿಯಂತ್ರಣ ರೇಖೆಯ (LoC) ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ಮತ್ತೊಮ್ಮೆ ಉದ್ಧಟತನ ಮೆರೆದಿರುವ ಪಾಕ್ ಗೆ ಭಾರತೀಯ ಸೇನೆಯ ಯೋಧರು ತಕ್ಕ ಪ್ರತ್ಯುತರ ನೀಡಿದೆ.
ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ತಾನ ಸೇನೆ ಯೋಧರು ಹತರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಹತ್ಯೆಯಾದ ಪಾಕಿಸ್ತಾನ ಆರ್ಮಿ ಸೈನಿಕರ ಪಟ್ಟಿಯಲ್ಲಿ 2-3 ಪಾಕಿಸ್ತಾನ ಆರ್ಮಿ ಸ್ಪೆಷಲ್ ಸರ್ವೀಸ್ ಗ್ರೂಪ್ (ಎಸ್ ಎಸ್ ಜಿ) ಕಮಾಂಡ್‌ʼಗಳು ಸೇರಿವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಲ್ಲಿ 10-12 ಪಾಕಿಸ್ತಾನ ಸೇನೆಯ ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನ ಆರ್ಮಿ ಬಂಕರ್ ಗಳು, ಇಂಧನ ಡಂಪ್ʼಗಳು ಮತ್ತು ಲಾಂಚ್ ಪ್ಯಾಡ್ʼಗಳು ನಾಶವಾಗಿವೆ ಎಂದು ಎಎನ್ ಐ ವರದಿ ಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ಬಿಎಸ್ ಎಫ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಗುರೆಜ್ ಸೆಕ್ಟರ್ ನಿಂದ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ʼವರೆಗೆ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss