ಹೊಸದಿಗಂತ ಆನ್ಲೈನ್ ಡೆಸ್ಕ್:
ಪಾಕಿಸ್ತಾನದ ಸಂಸತ್ನಲ್ಲಿರುವ ಸಂಸದರುಗಳ ಪೈಕಿ 12 ಮಂದಿ ಶತಕೋಟ್ಯಾಧಿಪತಿಗಳಿದ್ದಾರೆ!
ಈ ಮಾಹಿತಿಯನ್ನು ‘ಡಾನ್ ನ್ಯೂಸ್’ ವರದಿ ಮಾಡಿದೆ. ಶತಕೋಟ್ಯಾಧಿಪತಿಗಳಲ್ಲಿ ಐವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷಕ್ಕೆ ಸೇರಿದವರಾಗಿದ್ದು, ಉಳಿದವರು ವಿವಿಧ ಪಕ್ಷಗಳಿಗೆ ಸೇರಿದವರಿದ್ದಾರೆ ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.
ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಪ್ರಧಾನಿ ಇಮ್ರಾನ್ ಖಾನ್, ಮಾಜಿ ಪ್ರಧಾನಿ ಶಾಹಿದ್ ಅಬ್ಬಾಸಿ ಸಹಿತ ಇತರ ರಾಜಕೀಯ ಮುಖಂಡರು ಕಳೆದ ವರ್ಷ100 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರು. ಆದರೆ, ಈ ವರ್ಷ ಅವರ ಆಸ್ತಿಯ ಮೌಲ್ಯದಲ್ಲಿ ಕುಸಿತವುಂಟಾಗಿದೆ. ವಿವಿಧ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಹೆಚ್ಚಿನವರು ಶ್ರೀಮಂತರಾಗಿದ್ದು, ದೇಶ, ವಿದೇಶಗಳಲ್ಲಿ ದೊಡ್ಡಮಟ್ಟದ ಆಸ್ತಿ ಹೊಂದಿದ್ದಾರೆ. ಹಲವರು ಷೇರು ಮಾರುಕಟ್ಟೆಯಲ್ಲೂ ಅಪಾರ ಹೂಡಿಕೆ ಮಾಡಿದ್ದಾರೆ ಎಂದು ಅದು ವರದಿ ಮಾಡಿದೆ.