Monday, August 8, 2022

Latest Posts

ಪಾಕ್ ಸರ್ಕಾರದಿಂದ ನವಾಜ್ ಷರೀಫ್ ವಿರುದ್ಧ ಅರೆಸ್ಟ್​ ವಾರೆಂಟ್ ಜಾರಿ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಪಾಕಿಸ್ತಾನ ಸರ್ಕಾರ ಅರೆಸ್ಟ್​ ವಾರೆಂಟ್ ಹೊರಡಿಸಿದೆ.
ಸದ್ಯ ಬ್ರಿಟನ್​ನಲ್ಲಿದ್ದುಕೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿಗೆ ನವಾಜ್‌ ಷರೀಫ್ (70) ಅವರು ಕಳೆದ ವರ್ಷ ನವೆಂಬರ್​ನಲ್ಲಿ ಲಾಹೋರ್ ಕೋರ್ಟ್​ನ ಅನುಮತಿ ಪಡೆದು 4 ವಾರಗಳ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. 2018ರ ಜುಲೈ 6ರಂದು ಅವೆನ್​ಫೀಲ್ಡ್ ಪ್ರಾಪರ್ಟಿ ಕೇಸ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದರು.
2018ರ ಡಿಸೆಂಬರ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು 7 ವರ್ಷ ಸಜೆ ಶಿಕ್ಷೆಗೆ ಒಳಗಾಗಿದ್ದರು. ಆದರೆ, 2 ಪ್ರಕರಣಗಳಲ್ಲಿ ಜಾಮೀನು ಪಡೆದ ಅವರು ಲಂಡನ್​ಗೆ ಚಿಕಿತ್ಸೆಗಾಗಿ ತೆರಳಿದ್ದರು ಕೋರ್ಟ್​ ಅವರಿಗೆ 8 ವಾರಗಳ ಕಾಲಾವಕಾಶವನ್ನು ಹಿಂದಿರುಗುವುದಕ್ಕೆ ನೀಡಿತ್ತು. ಆದರೆ ಅವರು ಹಿಂದಿರುಗದ ಕಾರಣ ಈಗ ಪಾಕ್ ಸರ್ಕಾರ ಅರೆಸ್ಟ್ ನೋಟಿಸ್ ಹೊರಡಿಸಿದೆ. ಸೆಪ್ಟೆಂಬರ್ 22 ರಂದು ಅವರನ್ನು ಇಸ್ಲಾಮಾಬಾದ್ ಕೋರ್ಟ್​ ಎದುರು ಹಾಜರುಪಡಿಸಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss