Friday, July 1, 2022

Latest Posts

ಪಾತಕಿ ರವಿ ಪೂಜಾರಿ 14ದಿನ ಪೊಲೀಸ್ ವಶ

ಬೆಂಗಳೂರು: ಹಲವು ದಶಕಗಳಿಂದ ಭೂಗತನಾಗಿದ್ದ ಪಾತಕಿ ರವಿ ಪೂಜಾರಿ ಸಿಸಿಬಿ ವಶದಲ್ಲಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಸೋಮವಾರ ಬೆಳಗ್ಗೆ ರಾಜ್ಯ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದ ಕೂಡಲೇ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದರು.

ದಕ್ಷಿಣ ಆಫ್ರಿಕಾದ ಸೆನೆಗಲ್‌ನಿಂದ ಬೆಂಗಳೂರಿಗೆ ಕರೆತಂದ ಕರ್ನಾಟಕ ಪೊಲೀಸರು ರವಿ ಪೂಜಾರಿಯನ್ನು ವೈದ್ಯ ಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗದೆ ಮಡಿವಾಳದ ವಿಧಿವೀನ ಪ್ರಯೋಗಾಲಯಕ್ಕೆ ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಕೋರ್ಟ್‌ನಲ್ಲಿ ಸರ್ಕಾರಿ ಪರ ಅಭಿಯೋಜಕರು, ರವಿ ಪೂಜಾರಿ ಮೇಲೆ ಗಂಭೀರ ಸ್ವರೂಪದ ನಾನಾ ಪ್ರಕರಣಗಳಿರುವುದರಿಂದ ಹೆಚ್ಚಿನ ವಿಚಾರಣೆಗೆ ಮಾ. 9ರ ತನಕ ಪೊಲೀಸರ ವಶಕ್ಕೆ ನೀಡಬೇಕೆಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮಾ.7ರವರೆಗೆ (14 ದಿನ) ಪೊಲೀಸ್ ವಶಕ್ಕೆ ನೀಡಿದರು.

ಸೆನೆಗಲ್ನಲ್ಲಿ ಒಳ್ಳೆಯ ವ್ಯಕ್ತಿ: ರವಿ ಪೂಜಾರಿ ಸೆನೆಗಲ್‌ನಲ್ಲಿ ಭಾರತೀಯ ಹೊಟೇಲ್ ಒಂದನ್ನು ನಡೆಸುತ್ತಾ ತಿಂಗಳಿಗೆ 25 ಲಕ್ಷ ರೂ. ಆದಾಯ ಗಳಿಸಿ, ಆ ಹಣದಿಂದ ಅಲ್ಲಿನ ಜನ ರಿಗೆ ಕೆಲಸ ಮಾಡಿಕೊಟ್ಟು ಒಳ್ಳೆಯ ವ್ಯಕ್ತಿಯಂತೆ ಬಿಂಬಿಸಿಕೊಳ್ಳುತ್ತಿದ್ದ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ತಿಳಿಸಿದರು.

ಬೆಂಗಳೂರಿನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಭೂಗತಪಾತಕಿ ಒಬ್ಬ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಅಂದಿನಿಂದ ತಲೆಮರೆಸಿಕೊಂಡಿದ್ದ. ಮೊದಲು ನೇಪಾಳಕ್ಕೆ ಹೋಗಿ ಅಲ್ಲಿಂದ ಬ್ಯಾಂಕಾಕ್, ಉಗಾಂಡಾಕ್ಕೆ ತೆರಳಿ ತದನಂತರ ಬುರ್ಕಿನೋ ಪಾಸ್ಕೊದಲ್ಲಿ 12 ವರ್ಷಗಳ ನೆಲೆಸಿ ಆನಂತರ ಸೆನೆಗಲ್‌ಗೆ ಪರಾರಿಯಾಗಿದ್ದ ಎಂದರು.

ಬೋರ್ವೆಲ್ ಕೊರೆಸಿದ್ದ: ಬುರ್ಕಿನೋ ಪಾಸ್ಕೊದಲ್ಲಿ ಸಮಾಜ ಸೇವೆ ಮಾಡುತ್ತಿದ್ದ. ಬುರ್ಕಿನೋ ಪಾಸ್ಕೋ ನಾಗರಿಕತ್ವ ಪಡೆದು ಅಲ್ಲಿನ ಪಾಸ್‌ಪೋರ್ಟ್ ಮೇಲೆ ವ್ಯವಹರಿಸಲು ಆರಂಭಿಸಿದ್ದ. ಸೆನೆಗಲ್‌ಗೆ ತೆರಳಿ ಅಲ್ಲಿ ಭಾರತೀಯ ಹೊಟೇಲ್‌ನ್ನು ಆರಂಭಿಸಿದ್ದ. ನೀರಿಲ್ಲದ ಗ್ರಾಮಗಳಿಗೆ ತೆರಳಿ ಅಲ್ಲಿ ಬೋರ್‌ವೆಲ್ ಕೊರೆಸುವುದು, ನವರಾತ್ರಿ ಸಂದರ್ಭದಲ್ಲಿ ಬಡವರಿಗೆ ಬಟ್ಟೆ ಹಾಗೂ ದಾನಗಳನ್ನು ಮಾಡುವ ಮೂಲಕ ಹೆಸರು ಪಡೆದಿದ್ದ ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss