Saturday, June 25, 2022

Latest Posts

ಪಾದಚಾರಿಗೆ ಬೈಕ್ ಡಿಕ್ಕಿ: ಓರ್ವ ಸಾವು

ಹೊಸ ದಿಗಂತ ವರದಿ ಕೊಡಗು:

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಾದಾಪುರದಲ್ಲಿ ನಡೆದಿದೆ.

ಮಾದಾಪುರ ಸಮೀಪದ ಗರ್ವಾಲೆ ಗ್ರಾಮದ ನಿವಾಸಿ ಓಡಿಯಂಡ ನಂಜುಂಡ (65) ಎಂಬವರೇ ಮೃತಪಟ್ಟವರು.

ತನ್ನ ಪತ್ನಿಯೊಂದಿಗೆ ಮಡಿಕೇರಿಗೆ ತೆರಳಿ, ಮಾದಾಪುರಕ್ಕೆ ವಾಪಸ್ ಆಗಿದ್ದರು. ಮಾದಾಪುರದಿಂದ ಗರ್ವಾಲೆ ಗ್ರಾಮಕ್ಕೆ ತೆರಳುವ ಸಂದರ್ಭ ಮಾದಾಪುರದ ಎಂ.ಡಿ. ಸ್ಟೋರ್ ಮುಂಭಾಗ ಕಾರೆಕಾಡಿನ ನದೀಮ್ ಎಂಬಾತ ಚಾಲಿಸುತ್ತಿದ್ದ ಬುಲ್ಲೆಟ್ ಬೈಕ್ ಡಿಕ್ಕಿಯಾಗಿದೆ.ಘಟನೆಯಿಂದ ತೀವ್ರ ಗಾಯಗೊಂಡ ನಂಜುಂಡ ಅವರನ್ನು ಮಾದಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಬಗ್ಗೆ ಮೃತರ ಮಗ ಓಡಿಯಂಡ ಬೋಪಣ್ಣ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss