Tuesday, June 28, 2022

Latest Posts

ಪಾದಚಾರಿ ಮೇಲೆ ಒಂಟಿ ಸಲಗ ದಾಳಿ: ಮುಂಬೈ ಮೂಲದ ವ್ಯಕ್ತಿಗೆ ಗಂಭೀರ ಗಾಯ

ಸುಂಟಿಕೊಪ್ಪ: ಕುಶಾಲನಗರದಿಂದ ಮಡಿಕೇರಿ ಕಡೆಗೆ ನಡೆದು ಬರುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ನಡೆದಿದೆ.
ಈ ಘಟನೆಯಿಂದ ಮುಂಬೈ ಮೂಲದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕುಶಾಲನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ರಕ್ಷಿತಾರಣ್ಯದ ಬಳಿ ಸೋಮವಾರ ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಅಂದಾಜು (35) ಪ್ರಾಯದ ವ್ಯಕ್ತಿಯೊಬ್ಬರು ನಡೆದುಕೊಂಡು ಬರುತ್ತಿದ್ದ ವೇಳೆ ಒಚಿಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ.
ಕೈ ಕಾಲುಗಳಿಗೆ ಗಂಭೀರ ಗಾಯಗೊಂಡ ವ್ಯಕ್ತಿ ಸಲಗದ ದಾಳಿಯಿಂದ ತಪ್ಪಿಸಿಕೊಂಡು ಬಂದು 7ನೇ ಹೊಸಕೋಟೆಯ ಮೆಟ್ನಳ್ಳದ ಬಸ್ ತಂಗುದಾಣದಲ್ಲಿ ನೋವಿನಿಂದ ಕಿರುಚಾಡುತ್ತಿದ್ದುದನ್ನು ಕೇಳಿಸಿಕೊಂಡ ಮಿಥುನ್ ಎಂಬವರು ಬಂದು ವಿಚಾರಿಸಿದಾಗ ಆ ವ್ಯಕ್ತಿ ತಾನು ಮುಂಬೈ ಮೂಲದವನು ಎಂದು ತಿಳಿಸುವುದರೊಂದಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಸ್ಥಳೀಯರಾದ ಮಿಥುನ್ ಹಾಗೂ ಗಂಗಾಧರ್ ಅವರುಗಳು ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ತಿಳಿಸಿದ ಮೇರೆಗೆ ಕುಶಾಲನಗರದ ಸಂಚಾರಿ ಪೊಲೀಸರು ಬಂದು ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss