Friday, July 1, 2022

Latest Posts

ಪಾದರಾಯನಪುರದ ತಬ್ಲಿಘಿಗಳ ಪತ್ತೆ ಕಾರ್ಯ ಚುರುಕು!

ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿದ್ದ ತಬ್ಲಿಘಿಗಳ ಗಲಾಟೆ ಬಳಿಕ ಪಾದರಾಯನಪುರ ಸಂಪೂರ್ಣ ತಣ್ಣಗಾಗಿದ್ದು ಬಂಧಿತರ ಸಂಖ್ಯೆ ಮಂಗಳವಾರ ಮಧ್ಯಾಹ್ನದ ವೇಳೆಗೆ 149 ಕ್ಕೆ ಏರಿಕೆಯಾಗಿದೆ.

ಸೋಮವಾರ ಪೊಲೀಸ್ ಪಹರೆ ನಿರ್ಮಿಸಿದ ಬಳಿಕ ಪಾದರಾಯನಪುರ ವಾರ್ಡ್ ನ ಪ್ರತಿ ರಸ್ತೆ, ಗಲ್ಲಿಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಯಾರೊಬ್ಬರೂ ತಮ್ಮ ಗಲ್ಲಿ ದಾಟಿ ಹೊರಗೆ ಬರುವುದಕ್ಕೆ ಅವಕಾಶ ಇಲ್ಲದಂತಾಗಿದೆ.

ಮತ್ತೊಂದೆಡೆ ತಬ್ಲಿಘಿಗಳ ಗಲಾಟೆಗೆ ಸಂಬಂಧಪಟ್ಟಂತೆ ಪೊಲೀಸರ ತನಿಖೆ ಮುಂದುವರೆದಿದ್ದು ಮಂಗಳವಾರ ಮಧ್ಯಾಹ್ನದ ವೇಳೆಗೆ ಬಂಧಿತರ ಸಂಖ್ಯೆ 149 ತಲುಪಿದೆ. ಸೋಮವಾರ ರಾತ್ರಿವರೆಗೂ 119 ಮಂದಿಯ ಬಂಧನವಾಗಿದ್ದರೆ ಮಂಗಳವಾರ ಬೆಳಗ್ಗೆಯಿಂದ 30 ಮಂದಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆ ಇನ್ನು ಮುಂದುವರೆದಿದೆ.

ಐದು ಮಂದಿ ಸೂತ್ರದಾರರು: ಪಾದರಾಯನಪುರದ‌ಲ್ಲಿ ನಡೆದ ಇದುವರೆಗಿನ ತನಿಖೆಯಲ್ಲಿ ಇಡೀ ದಾಂಧಲೆಗೆ ಐದು ಮಂದಿಯ ಪ್ರಚೋದನೆಯೇ ಕಾರಣ ಎನ್ನುವುದು ಗೊತ್ತಾಗಿದೆ. ಇದರಲ್ಲಿ ಪ್ರಮುಖವಾಗಿ ವಜೀರ್, ಇರ್ಫಾನ್, ಕಬೀರ್ , ಇರ್ಷಾದ್ ಅಹಮ್ಮದ್ , ಹಲ್ಸಾನ್ ಅಲಿಯಾಸ್ ಫರ್ಜುವಾ ಎನ್ನುವ ಮಹಿಳೆಯ ಪ್ರಚೋದನೆಯಿಂದಲೇ ಗಲಾಟೆ ನಡೆದಿದ್ದು ಎನ್ನುವುದು ಗೊತ್ತಾಗಿದೆ. ಇವರನ್ನು ಮಾತ್ರ ಮತ್ತೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ: ಈ ಘಟನೆಯಲ್ಲಿ ಬಂಧಿತರ ಸಂಖ್ಯೆ ಸದ್ಯ 149 ತಲುಪಿದ್ದು, ಈ ಪ್ರಮಾಣ ಇನ್ನು ಹೆಚ್ಚಾಗಬಹುದು. ಗುಂಪು ದಾಂಧಲೆಯಲ್ಲಿ ಇಷ್ಟೇ ಮಂದಿ ಭಾಗಿಯಾಗಿದ್ದರು ಎಂದು ಖಚಿತವಾಗಿ ಲೆಕ್ಕ ಹೇಳುವುದು ಸಾಧ್ಯವಿಲ್ಲ. ಬಂಧಿತರ ವಿಚಾರಣೆ ಮುಂದುವರೆದ ಹಾಗೆ ಹೊಸ ಹೊಸ ಹೆಸರುಗಳು ಹೊರಗೆ ಬರುತ್ತಿವೆ. ಹೀಗಾಗಿ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸೋಂಕಿತರ ಸಂಪರ್ಕ ಹೊಂದಿದ್ದವರ ಪತ್ತೆ ಚುರುಕು: ಪಾದರಾಯನಪುರದಲ್ಲಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು ಓಡಿಹೋಗಿದ್ದಾರೆ. ಅವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಘಟನೆಯಿಂದ ತೀರಾ ಬೇಸರವಾಗಿದೆ. ವೈದ್ಯರು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದೊಂದು ಅವಿವೇಕಿತನ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಪೊಲೀಸ್ ವಶದಲ್ಲಿರುವವರ ತನಿಖೆ ನಡೆಯುತ್ತಿದೆ. ಈವರೆಗೆ 5 ಎಫ್ಐಆರ್ ದಾಖಲಾಗಿದ್ದು, ಈಗ 6ನೇ ಎಫ್ಐಆರ್ ದಾಖಲು ಮಾಡಲಿದ್ದೇವೆ. ಸೆಕೆಂಡರಿ ಕಾಂಟ್ಯಾಕ್ಟ್ ಇದ್ದವರು ಓಡಿ ಹೋಗಿದ್ದಾರೆ. ಅವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಹಾಗೇ ಯಾರ ಮೇಲೂ ರೌಡಿಶೀಟರ್ ತೆರೆದಿಲ್ಲ. ಅದಕ್ಕೆ ಅದರದ್ದೇ ಆದ ಮಾನದಂಡ ಇದೆ. ಸದ್ಯ ಪ್ರತ್ಯೇಕವಾಗಿ ಒಬ್ಬೊಬ್ಬರ ಮೇಲೂ ಪ್ರಕರಣ ದಾಖಲಾಗಿದೆ ಎಂದು ಸುದ್ದಿಗಾರರಿಗೆ‌ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss