Sunday, June 26, 2022

Latest Posts

ಪಾಯಸ ಮಾಡುವ “ಸಬ್ಬಕ್ಕಿ”ಯನ್ನು ಈ ರೀತಿ ಬಳಸಿದರೆ ಆರೋಗ್ಯ ವೃದ್ಧಿಯಾಗುತ್ತದೆ…ಸಿಂಪಲ್ ಮನೆಮದ್ದು

ಸಬ್ಬಕ್ಕಿಯನ್ನು ಹೆಚ್ಚಾಗಿ ಪಾಯಸ, ಸಂಡಿಗೆ, ಉಪ್ಪಿಟ್ಟು ಮಾಡಲು ಬಳಸುತ್ತಾರೆ. ಸಬ್ಬಕ್ಕಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸಬ್ಬಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಅನಾಹುತವಿಲ್ಲ. ವೃದ್ಧರಿಂದ ಹಿಡಿದು ಮಕ್ಕಳವರೆಗೂ ಇದನ್ನು ಸೇವಿಸನಹುದು. ಸಬ್ಬಕ್ಕಿಯಿಂದ ಏನೆಲ್ಲಾ ಲಾಭವಿದೆ ನೋಡಿ…

ಮಧುಮೇಹ: ಸಕ್ಕರೆ ಕಾಯಿಲೆ ಇರುವವರು ಸಬ್ಬಕ್ಕಿಯನ್ನು ನೀರಿನಲ್ಲಿ ಹಾಕಿ ಗಂಜಿ ರೀತಿ ಮಾಡಿಕೊಂಡು ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ಮಲಬದ್ಧತೆ: ಮಲಬದ್ಧತೆ ಸಮಸ್ಯೆ ಇರುವವರು ಸಬ್ಬಕ್ಕಿ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವರಣೆಯಾಗುತ್ತದೆ.

ಅಜೀರ್ಣ: ಹಸಿವಾಗದಿರುವುದು, ಅಜೀರ್ಣ, ಹೊಟ್ಟೆಉಬ್ಬರ ಇಂತಹ ಸಮಸ್ಯೆ ಇರುವವರು ಹೆಚ್ಚು ಸಬ್ಬಕ್ಕಿ ಗಂಜಿ ಸೇವಿಸುವುದನ್ನು ರೂಢಿಸಿಕೊಳ್ಳಿ. ಈ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತದೆ.

ಗರ್ಭಿಣಿಯರು: ಗರ್ಭಿಣಿಯರು ಸಬ್ಬಕ್ಕಿಯನ್ನು ಸೇವಿಸಬಹುದು. ಸಬ್ಬಕ್ಕಿಯಲ್ಲಿ ಬಿಟಮಿನ್ ಬಿ6 ಮತ್ತು ಪೋಲೆಟ್ ಅಂಶ ಹೆಚ್ಚಾಗಿ ಇರುವ ಕಾರಣ ಹುಟ್ಟುವ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಇದು ಸಹಕಾರಿ.

ಉಷ್ಣತೆ: ದೇಹದ ಉಷ್ಣತೆ ಹೆಚ್ಚಾಗಿ ಇರುವವರು ಸಬ್ಬಕ್ಕಿಯನ್ನು ಸೇವಿಸಿದರೆ ಉಷ್ಣತೆ ನಿಯಂತ್ರಣಕ್ಕೆ ಬರುತ್ತದೆ.

ಮಾಂಸ: ಸಬ್ಬಕ್ಕಿಯಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿರುವ ಕಾರಣ ನಮ್ಮ ದೇಹದ ಮಾಂಸ, ಖಂಡಗಳು ಬೆಳವಣಿಗೆಗೆ ಸಹಕಾರಿಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss