Sunday, August 14, 2022

Latest Posts

ಪಾಲಹಳ್ಳಿ ಗ್ರಾಮದ ರೌಡಿಶೀಟರ್ ಹರೀಶ್ ಹತ್ಯೆ ಪ್ರಕರಣ: 6 ಮಂದಿ ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ರಸ್ತೆಯ ಪಕ್ಷಿಧಾಮ ಗೇಟ್ ಬಳಿ ಅ.22ರ ರಾತ್ರಿ ಕೊಲೆಯಾಗಿದ್ದ ರೌಡಿಶೀಟರ್ ಪಾಲಹಳ್ಳಿ ಗ್ರಾಮದ ಹರೀಶ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಪಟ್ಟಣ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಟ್ಟಣದ ಸತ್ಯನಾರಾಯಣ ಅಲಿಯಾಸ್ ಆರ್.ಎಕ್ಸ್(25), ಭರತ್ ಕುಮಾರ್ ಆರ್. ಅಲಿಯಾಸ್ ಭಂಡೆ ಭರತ(23), ಗಂಜಾಂನ ರಕ್ಷಿತ್ ಎಸ್. ಅಲಿಯಸ್ ಕುಂಟ(22), ಇಬ್ರಾಹಿಂ ಪಾಷ ಅಲಿಯಾಸ್ ಇಬ್ರಾಹಿಂ(27), ಮೈಸೂರು ಸಿದ್ದಲಿಂಗಪುರ ಗ್ರಾಮದ ದರ್ಶನ್ ಅಲಿಯಸ್ ದರ್ಶು(25), ಧರ್ಮರತ್ನಾಕರ ಅಲಿಯಾಸ್ ಮಾಲಿಂಗ(25) ಬಂಧಿತರು.
ಬಂಧಿತ ಆರೋಪಿಗಳಿಗೂ ಮತ್ತು ಮೃತ ಹರೀಶ್‍ಗೂ 1 ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದ್ದು, ಆ ವೈಷಮ್ಯದ ಹಿನ್ನೆಲೆಯಲ್ಲಿ ಅ.22ರ ರಾತ್ರಿ ಮಾರಕಸ್ತ್ರಗಳಿಂದ ಕೊಲೆ ಮಾಡಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲ್ಪಟ್ಟ 1 ಓಮಿನಿ ಕಾರು, 2 ಮೋಟಾರ್ ಸೈಕಲ್, ಮೋಬೈಲ್ ಫೋನ್ ಗಳು ಸೇರಿದಂತೆ ಲಾಂಗ್ ಅನ್ನು ವಶ ಪಡಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss