ಪಾಲ್ಘರ್: ಮಹಾರಾಷ್ಟ್ರದ ಗಡ್ಚೋಲಿ ಬಳಿಯ ಪಾಲ್ಘರ್ನಲ್ಲಿ ನಡೆದ ಮೂವರು ಹಿಂದು ಸಂತರ ಬರ್ಬರ ಹತ್ಯೆಯ ಹಿಂದೆ ಸಿಪಿಎಂ ಬೆಂಬಲಿಗರು ಮತ್ತು ಕ್ರೈಸ್ತ ಮಿಷನರಿಗಳ ಕೈವಾಡವಿರುವುದಕ್ಕೆ ಇನ್ನಷ್ಟು ಪುಷ್ಟಿ ಲಭಿಸಿದೆ.
ಗುರುವಾರ ರಾತ್ರಿ ಮುಂಬೈಯಲ್ಲಿನ ತಮ್ಮ ಗುರು ಮಹಂತ್ ರಾಮ್ ಗಿರಿ ಮಹಾರಾಜ್ ಅವರ ಅಂತ್ಯವಿಯಲ್ಲಿ ಪಾಲ್ಗೊಳ್ಳಲೆಂದು ಹೋಗುತ್ತಿದ್ದ ಪೂಜ್ಯ ಮಹಾರಾಜ್ ಕಲ್ಪವೃಕ್ಷ ಗಿರಿ (70), ಪೂಜ್ಯ ಸುಶೀಲ್ ಗಿರಿ ಮಹಾರಾಜ್(35)ಮತ್ತು ಅವರ ಚಾಲಕ ನೀಲೇಶ್ ತೆಲ್ಗಡೆ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಇದೀಗ ಕ್ರೈಸ್ತ ಮಿಷನರಿಗಳ ಭಾರೀ ಕಾರ್ಯಾಚರಣೆ ನಡೆಯುತ್ತಿರುವ ಈ ಪ್ರದೇಶದಲ್ಲಿ ಈ ದುಷ್ಕರ್ಮಿಗಳಿಗೆ ಸಿಪಿಎಂ ನಾಯಕರೇ ಕುಮ್ಮಕ್ಕು ನೀಡಿದ್ದು, ಇದೊಂದು ವ್ಯವಸ್ಥಿತ ಸಂಚಾಗಿತ್ತು. ಇಲ್ಲಿ ಕಳೆದ ಅನೇಕ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಹಿಂದುಗಳ ಅದರಲ್ಲೂ ಬುಡಗಟ್ಟು ಜನರನ್ನು ಮತಾಂತರಗೊಳಿಸಲಾಗುತ್ತಿದೆ. ಈ ಮತಾಂತರಕ್ಕೆ ಇಂಬು ನೀಡುವ ನಿಟ್ಟಿನಲ್ಲಿ ಬುಡಗಟ್ಟು ಜನರಲ್ಲಿ ವ್ಯಾಪಕ ವಿಷ ತುಂಬಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರು ಆರಂಭದಲ್ಲಿ ಈ ಮೂವರನ್ನು ಅರಣ್ಯ ಇಲಾಖೆ ಠಾಣೆಯಲ್ಲಿ ಇರಿಸಿದ್ದರೂ ಹಠಾತ್ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ಈ ಹೀನ ಕೃತ್ಯವೆಸಗಿದ್ದು ಸಿಪಿಎಂ ನಾಯಕರ ಕುಮ್ಮಕ್ಕಿನಿಂದಲೇ ಎಂಬುದನ್ನು ಅಲ್ಲಿನ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.ಈಗ ಬಂತ ಎಲ್ಲ ೧೧೦ಮಂದಿ ಸಿಪಿಎಂ ಕಾರ್ಯಕರ್ತರೇ ಆಗಿದ್ದಾರೆ.ದಿವಾಶಿ ಗದಗ್ಪಾಡ ಗ್ರಾಮದ ಜೈರಾಮ್ ಧಾಕ್ ಭಾವರ್ , ಕಿನ್ಹಾವಳಿ ಖೋರಿಪಾದದ ಮಹೇಶ್ ಸೀತಾರಾಮ್ ರಾವಟೆ, ದಿವಾಶಿ ಸಾಥೇಪಾದದ ಗಣೇಶ್ ದೇವಾಜಿ ರಾವ್, ದಿವಾಶಿ ಸಾಥೇಪಾದದ ರಾಮ್ದಾಸ್ ರೂಪಜಿ ಆಸರೆ, ದಿವಾಶಿ ಪಾಟಿಲ್ಪಾದ ಗ್ರಾಮದ ಸುನೀಲ್ ಸೋಮಾಜಿ ರಾವಟೆ ಈ ಐದು ಮಂದಿ ಪ್ರಮುಖ ಪಾತಕಿಗಳು ಕೂಡಾ ಸಿಪಿಎಂ ಕಾರ್ಯಕರ್ತರೇ ಎಂಬುದಾಗಿ ತಿಳಿದುಬಂದಿದೆ.
ಇಲ್ಲಿನ ಎನ್ಜಿಒ ಕಷ್ಟಕಾರಿಯ ಮುಖ್ಯಸ್ಥ ಶಿರಾಜ್ ಬಾಲ್ಸರ ಕ್ರೈಸ್ತ ಮಿಷನರಿಗಳ ಜೊತೆಗೂಡಿ ಇದೀಗ ಬಂತ ಆರೋಪಿಗಳಿಗೆ ಜಾಮೀನು ಕೊಡಿಸಲು ಯತ್ನಿಸುತ್ತಿದ್ದು, ಸ್ಥಳೀಯ ಸಿಪಿಎಂ ಶಾಸಕ ವಿನೋದ್ ನಿಕೋಲೇ ಇಡೀ ಹತ್ಯಾಕಾಂಡದ ಹಿಂದಿರುವ ಮುಖ್ಯ ಸೂತ್ರಧಾರಿ ಎನ್ನಲಾಗಿದೆ.
ಉನ್ನತ ತನಿಖೆಗೆ ವಿಹಿಂಪ ಆಗ್ರಹ
ಪಾಲ್ಘರ್ ಸಂತರ ಬರ್ಬರ ಹತ್ಯೆಯಲ್ಲಿ ಕಮ್ಯುನಿಸ್ಟರ ಕೈವಾಡವಿದ್ದು, ಈ ಬಗ್ಗೆ ಅತ್ಯುನ್ನತ ತನಿಖೆ ನಡೆಸುವಂತೆ ವಿಶ್ವಹಿಂದು ಪರಿಷತ್ತು ಕೂಡಾ ಆಗ್ರಹಿಸಿದೆ.