Thursday, July 7, 2022

Latest Posts

ಪಾವಗಡ ಶ್ರೀರಾಮಕೃಷ್ಣಾಶ್ರಮದ ವತಿಯಿಂದ ಬಡವರಿಗೆ ಹೊದಿಕೆ ವಿತರಣೆ

ಹೊಸದಿಗಂತ ವರದಿ, ತುಮಕೂರು:

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದರು ಇಂದು ಪಾವಗಡದಲ್ಲಿ ಬೀದಿ ತರಕಾರಿ ವ್ಯಾಪಾರಿಗಳು, ರಸ್ತೆಯಲಿ ಚಿಂದಿ ಆರಿಸುವವರಿಗೆ ಮತ್ತು ವೃದ್ದರಿಗೆ ಬೆಚ್ಚಗಿನ ಹೊದಿಕೆ, ಸೋಪು, ಸ್ಯಾನಿಟೈಸರ್, ಮಾಸ್ಕ್ ಗಳನ್ನು ನೀಡಿದರು.

ಸುಮಾರು 75 ಜನರು ಈ ಸೌಲಭ್ಯವನ್ನು ಪಡೆದುಕೊಂಡರು. ಎಲ್ಲರಿಗೂ ಆಹಾರದ ಪೊಟ್ಟಣಗಳನ್ನೂ ನೀಡಲಾಯಿತು. ಶ್ರೀ ರಾಮಕೃಷ್ಣ ಆಶ್ರಮ, ಇನ್ಫೋಸಿಸ್ ಫೌಂಡೇಶನ್ ಮತ್ತು ಪಾವಗಡದ ವಿವೇಕ ಬ್ರಿಗೇಡ್ ಸಮರ್ಪಣ ಸಂಯುಕ್ತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss