Saturday, August 13, 2022

Latest Posts

ಪಾಸಿಟಿವ್ ಬಂದ 14ನೇ ದಿನವೇ ಕಾರ್ಯಕ್ರಮದಲ್ಲಿ ಭಾಗಿಯಾದ ಮಿಥುನ್ ರೈ: ಕೋವಿಡ್ ನಿಯಮಗಳು ಯಾರಿಗಾಗಿ?

ಮಂಗಳೂರು: ಕೋವಿಡ್ ನಿಯಮಗಳನ್ನು ಜನಪ್ರತಿನಿಧಿಗಳು, ವಿವಿಧ ಪಕ್ಷದ ಕಾರ್ಯಕರ್ತರು ಮತ್ತೆ ಮತ್ತೆ ಉಲ್ಲಂಘಿಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ.
ಇತ್ತೀಚೆಗೆ ಬೋಳೂರಿನಲ್ಲಿ ಶಾಸಕ ಯು.ಟಿ.ಖಾದರ್ ಮತ್ತು ಐವನ್ ಡಿಸೋಜ ಮುಂತಾದವರು ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮುಖವನ್ನು ಹತ್ತಿರದಿಂದ ನೋಡುತ್ತಿರುವ ಚಿತ್ರ ವೈರಲ್ ಆಗಿತ್ತು.
ಪಾರದರ್ಶಕವಾಗಿ ಸೀಲ್ ಮಾಡಲಾದ ಮೃತದೇಹವನ್ನು ಯಾರೂ ಮತ್ತೆ ತೆರೆದು ನೋಡುವಂತಿಲ್ಲ. ಆದರೆ ಇಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮುಖವನ್ನು ತೋರಿಸುವ ದೃಶ್ಯಗಳು ವೈರಲ್ ಆಗಿದ್ದವು. ಇದೀಗ ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡ ನಿಯಮ ಉಲ್ಲಂಘಿಸಿದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಲಾರಂಭಿಸಿದೆ.
ಇವರಿಗೆ ಐಸೋಲೇಶನ್ ಇಲ್ಲವೇ?
ಈ ಬಾರಿ ಟೀಕೆಗೆ ಒಳಗಾಗುತ್ತಿರುವವರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ. ಮಿಥುನ್ ರೈಯವರು ತನಗೆ ಕೊರೋನಾ ಪಾಸಿಟಿವ್ ಬಂದ ಬಗ್ಗೆ ಜುಲೈ 17ರಂದು ಸ್ವತಃ ತನ್ನ ಫೇಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಂಗಳೂರಿಗೆ ಬಂದಾಗ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಪಾಸಿಟಿವ್ ಬಂದು ಜು.೩೧ಕ್ಕೆ ಸರಿಯಾಗಿ 14 ದಿನವಾಗುತ್ತದೆ. ಪಾಸಿಟಿವ್ ಮುಕ್ತವಾದರೂ ಬಳಿಕ ಕೆಲ ದಿನಗಳ ಕಾಲ ಐಸೋಲೇಶನ್‌ನಲ್ಲಿ ಇರಬೇಕು. ಜಿಲ್ಲಾ ಆರೋಗ್ಯಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಅದು ಎಲ್ಲೂ ಪಾಲನೆಯಾಗುತ್ತಲೇ ಇಲ್ಲ. ಜನಸಾಮಾನ್ಯರಿಗೆ ಮಾತ್ರ ನಿಯಮಗಳು ಕಡ್ಡಾಯವಾಗಿ ಹೇರಲ್ಪಟ್ಟಂತಿವೆ. ಕಾಂಗ್ರೆಸ್ ಕಾರ್ಯಕರ್ತರಿಗೆ, ಜನಪ್ರತಿನಿಧಿಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲವೇ? ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಲಾರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss