ಭುವನೇಶ್ವರ: ಪಿಂಚಣಿ ಹಣ ನೀಡಲು ಕಿರಿಕ್ ಮಾಡಿದ ಅಧಿಕಾರಿಗಳಿಗೆ ಮಹಿಳೆಯೊಬ್ಬರು ತನ್ನ ಬರೋಬ್ಬರಿ ೧೨೦ ವರ್ಷದ ಅನಾರೋಗ್ಯ ಪೀಡಿತ ತಾಯಿಯನ್ನು ಮಂಚದ ಸಮೇತ ಎಳೆದುಕೊಂಡು ಬಂದು ತೂರಿಸಿದ ಘಟನೆ ಒಡಿಶಾದ ನುವಾಪಾದ ಜಿಲ್ಲೆಯ ಬರಗನ್ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಲಾಭ್ ಭಾಗೆಲ್ (120) ಎಂಬವರು ಪಿಂಚಣಿದಾರರಾಗಿದ್ದು, ಅವ್ರ ಪಿಂಚಣಿ ಹಣ ಪಡೆಯಲು ಮಗಳು ಗುಂಜಾ ದೇವಿ (70) ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ, ಅಧಿಕಾರಿಗಳು ಪಿಂಚಣಿದಾರರೇ ಖುದ್ದಾಗಿ ಹಾಜರಾಗಬೇಕು ಎಂದಿದ್ದರು. ತಾಯಿಗೆ ವಯಸ್ಸಾಗಿದೆ ಬರಲು ಅಸಾಧ್ಯ ಎಂದರೂ ಅಧಿಕಾರಿಗಳ ಮನ ಕರಗಿರಲಿಲ್ಲ. ಇದರಿಂದ ಆತಂಕಗೊಂಡ ಮಹಿಳೆ ಪಿಂಚಣಿ ಸಿಗದಿದ್ದರೆ ಏನು ಗತಿ ಎಂಬ ಚೀನತೆಯಲ್ಲಿ ಹಾಸಿಗೆ ಹಿಡಿದಿರುವ ತಾಯಿಯನ್ನು ಮಂಚದ ಸಹಿತ ಬ್ಯಾಂಕ್ಗೆ ಎಳೆದು ತಂದಿದ್ದಾರೆ. ಈ ದೃಶ್ಯ ನೋಡಿ ಕಂಗಾಲಾದ ಅಧಿಕಾರಿಗಳು ಕೊನೆಗೆ ಹಣ ನೀಡಿ ಆಕೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶಾಸಕ ರಾಜು ದೊಲ್ಕಿಯಾ ಘಟನೆಯ ಬಗ್ಗೆ ಪ್ರತಿಕ್ರೀಯಿಸಿ ಈ ಅಮಾನವೀಯ ಘಟನೆಯನ್ನು ಖಂಡಿಸುತ್ತೇನೆ. ಈ ಬಗ್ಗೆ ತಕ್ಷಣ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ.