Saturday, July 2, 2022

Latest Posts

ಪಿಎಂ ಕೇರ್ಸ್ ನಿಧಿ ವಿರುದ್ಧ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕೊರೋನಾ ಸೋಂಕಿನಿಂದ ದೇಶದ ಪರಿಸ್ಥಿತಿ ನಿಭಾಯಿಸಲು ಜನರಿಂದ ದೇಣಿಗೆ ಸ್ವೀಕರಿಸಲು ಪ್ರಧಾನಿ ಮೋದಿ ಅವರು ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದ್ದರು. ಇದರ ಸ್ಥಾಪನೆಯ ಕುರಿತಾಗಿ ನ್ಯಾಯವಾದಿ ಎಂ.ಎಲ್. ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮುಖ್ಯ ನ್ಯಾಯಾಧೀಶರಾದ ಎಸ್. ಎ. ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠದಲ್ಲಿ ನ್ಯಾಯಾಧೀಶರಾದ ಎಲ್. ನಾಗೇಶ್ವರ್ ರಾವ್ ಮತ್ತು ಎಂ ಎಂ ಶಾಂತನ ಗೌಡರ್ ಅವರನ್ನೊಳಗೊಂಡ ನ್ಯಾಯಪೀಠವು ಪಿಎಂ ಕೇರ್ಸ್ ನಿಧಿಯ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಈಗಾಗಲೇ ಎಲ್ಲಾ ಗಣ್ಯರು, ಸಾರ್ವಜನಿಕರು ತಮ್ಮ ಶಕ್ತಿಯಾನುಸಾರ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ವಿದೇಶದಿಂದಲೂ ಭಾರತಕ್ಕೆ ದೇಣಿಗೆ ಬರುತ್ತಿರುವ ಕಾರಣ ಅದಕ್ಕೆ ಪ್ರತ್ಯೇಕ ಖಾತೆ ಇರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss