ಚಿಕ್ಕಮಗಳೂರು: ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಕೃತ್ಯಗಳನ್ನು ದಿನೇ ದಿನೇ ನಡೆಸುತ್ತಾ ಬಂದಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಶ್ರೀರಾಮಸೇನೆ ಮತ್ತಿತರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿವೆ.
2019 ರಿಂದ 2020ರವರೆಗೆ ದೇಶದಲ್ಲಿ ನಡೆದ ಹಲವಾರು ಕೃತ್ಯಗಳಲ್ಲಿ ಈ ಸಂಘಟನೆಯ ಹೆಸರು ಕೇಳಿ ಬಂದಿದೆ. ಮೊನ್ನೆ ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಬಿ.ಜಿ.ಹಳ್ಳಿಯಲ್ಲಿ ನಡೆದ ದಾಳಿಯಲ್ಲಿ 200 ವಾಹನಗಳನ್ನು ಸುಡಲಾಗಿದೆ. ಪೆÇಲೀಸ್ ಠಾಣೆ ಹಾಗೂ ಶಾಸಕರ ಮನೆಗಳಿಗೆ ಬೆಂಕಿ ಇಡಲಾಗಿದೆ. ಈ ಎಲ್ಲ ದುಷ್ಕøತ್ಯಕ್ಕೆ ಪ್ರಮುಖ ಕಾರಣ ಎಸ್ಡಿಪಿಐ ಹಾಗೂ ಪಿಎಫ್ಐ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ನಡೆದ ಪೆÇಲೀಸರ ಮೇಲಿನ ಕಲ್ಲು ತೂರಾಟದಲ್ಲೂ ಈ ಸಂಘಟನೆಗಳ ಪಾತ್ರವಿದ್ದು, ಕೂಡಲೇ ಅವನ್ನು ನಿಷೇಧಿಸಿ ದೇಶವನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದಲಿತ್ ಜನ್ ಸೇನಾ ಅಧ್ಯಕ್ಷ ಅನಿಲ್ ಆನಂದ್, ಭಾರತ್ ಸ್ವಾಭಿಮಾನ್ ಟ್ರಸ್ಟ್ನ ದಿವಾಕರ್ ಭಟ್, ರಾಷ್ಟ್ರೀಯ ಬಜರಂಗದಳದ ತುಡುಕೂರು ಮಂಜು, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತಂ ಇದ್ದರು.