Monday, July 4, 2022

Latest Posts

ಪಿಎಫ್ ಬ್ಯಾಲೆನ್ಸ್ ಹಣ ಎಷ್ಟು ಇದೆ ನೋಡಬೇಕಾ, ಜಸ್ಟ್ ಒಂದು ಮಿಸ್ ಕಾಲ್ ಕೊಡಿ

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆ 2019-2020 ರ ಆರ್ಥಿಕ ವರ್ಷದಲ್ಲಿ ಆರು ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಯ ಹಣವನ್ನು ನೀಡಲಿದೆ. ಎರಡು ಕಂತಿನಲ್ಲಿ ಬಡ್ಡಿ ಹಣವನ್ನು ಪಾವತಿಸಲಿದೆ. ಪಿಎಫ್ ಖಾತೆದಾರರಿಗೆ ಶೇಕಡಾ 8.50 ದರದಲ್ಲಿ ಬಡ್ಡಿ ಸಿಗಲಿದೆ. ಮೊದಲ ಕಂತಿನಲ್ಲಿ ಶೇಕಡಾ 8.15 ರಷ್ಟು ಬಡ್ಡಿಯನ್ನು ಪಾವತಿಸಲಿದೆ. ಡಿಸೆಂಬರ್ ವೇಳೆಗೆ ಶೇಕಡಾ 0.35 ರಷ್ಟು ಬಡ್ಡಿ ಪಾವತಿಸಲಿದೆ.
ಜಸ್ಟ್ ಒಂದು ಮಿಸ್ ಕಾಲ್ ಕೊಡಿ
ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ಬಗ್ಗೆ ತಿಳಿದುಕೊಳ್ಳಲು.. ನೀವು ಮಾಡಬೇಕಾಗಿದ್ದು ಇಷ್ಟೇ… ನಿಮ್ಮ ಪಿಎಫ್ ಖಾತೆಗೆ ನೊಂದಾಯಿಸಿಕೊಂಡ ಮೊಬೈಲ್ ಸಂಖ್ಯೆಯಿಂದ 01122901406ಗೆ ಕಾಲ್ ಮಾಡಿದ್ರೇ.. ತಕ್ಷಣ ನಿಮಗೆ ಪಿಎಫ್ ಬ್ಯಾಲೆನ್ಸ್ ಹಣ ಎಷ್ಟು ಇದೆ ಎಂಬ ಸಂದೇಶ ಬರುತ್ತದೆ. ಈ ಮೂಲಕ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿಯಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss