ಪಿಕಪ್ – ರಿಕ್ಷಾ ಡಿಕ್ಕಿ: ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಸೋಡಾ ಬಾಟಲಿ

0
114

ಬಂಟ್ವಾಳ: ಇಲ್ಲಿನ ಪೇಟೆಯಲ್ಲಿ ಗುರುವಾರ ಕೋಲ್ಡ್ ಡ್ರಿಂಕ್ ಬಾಟಲ್‌ಗಳನ್ನು ಹೇರಿಕೊಂಡು ಹೋಗತ್ತಿದ್ದ ಪಿಕಪ್ ಮತ್ತು ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ   ಚಾಲಕರು ಸೇರಿದಂತೆ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಬಿ.ಸಿ.ರೋಡಿನಿಂದ ಬಂಟ್ವಾಳ ಕಡೆಗೆ ಕೂಲ್‌ಡ್ರಿಂಕ್ಸ್ ಬಾಟಲ್‌ಗಳನ್ನು ಹೇರಿಕೊಂಡು ಹೋಗುತ್ತಿದ್ದ ಪಿಕಪ್ ಎದುರುಗಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪಿಕಪ್ ರಸ್ತೆ ಮಧ್ಯದಲ್ಲಿ ಪಲ್ಟಿಯಾಗಿದೆ.

ಮೂವರಿಗೆ ಗಾಯ: ಘಟನೆಯಿಂದಾಗಿ ರಿಕ್ಷಾ ಚಾಲಕ ಪರ್ಲ ನಿವಾಸಿ ಜೆರಾಲ್ಡ್ ಸಾಂಕ್ತಿಸ್, ಪಿಕಪ್ ಚಾಲಕ ಗೌತಮ್ ಹಾಗೂ ರಿಕ್ಷಾದಲ್ಲಿದ್ದ ಮೂವರು ಪ್ರಯಾಣಿಕರು ಗಾಯ ಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗಳನ್ನು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಟ್ರಾಫಿಕ್ ಜಾಮ್: ರಸ್ತೆ ಮಧ್ಯೆಪಿಕಪ್ ಅಡ್ಡಲಾಗಿ ಬಿದ್ದ ಕಾರಣ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಅಲ್ಲದೆ ಪಿಕಪ್‌ನಲ್ಲಿ ಕೋಲ್ಡ್‌ ಡ್ರಿಂಕ್ಸ್‌ನ ಬಾಟಲಿಗಳು ರಸ್ತೆಗೆ ಚೆಲ್ಲಿದ್ದರಿಂದ ಬಾಟಲ್‌ಗಳು ಪುಡಿಯಾಗಿ ರಸ್ತೆಯಿಡಿ ಹರಡಿತ್ತು. ಈ ಹಿನ್ನಲೆಯಲ್ಲಿ ಈ ರಸ್ತೆಯ ಮೂಲಕ ಬಂಟ್ವಾಳ ನಗರಕ್ಕಾಗಮಿಸುವ ಎಲ್ಲಾ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ರಸ್ತೆಯಿಂದ ಬಾಟಲ್ ಚೂರು ಹಾಗೂ ವಾಹನ ತೆರವುಗೊಳಿಸಿದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸೋಡಾ ಬಾಟಲಿ ತೆರವು: ಸ್ಥಳೀಯ ಯುವಕರು ಸೋಡಾ ಬಾಟಲಿಗಳನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು. ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ರಾಜೇಶ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here