Friday, August 19, 2022

Latest Posts

ಪಿಝ್ಝಾ,ಬರ್ಗರ್ ಹಾಗೂ ನೂಡಲ್ಸ್ ತಿನ್ನುವ ಅಭ್ಯಾಸ ಇದೆಯಾ? ಮೈದಾ ತಿನ್ನುವುದರಿಂದ ದೇಹಕ್ಕೆ ಏನಾಗುತ್ತದೆ ಗೊತ್ತೇ?

ಮೈದಾ ಇಲ್ಲದೆ ನಮ್ಮ ಅಡುಗೆಮನೆಯೇ ಇಲ್ಲ. ಪರೋಟಾ,ಮ್ಯಾಗಿ,ನೂಡಲ್ಸ್, ಮೊಮೊಸ್ ಎಲ್ಲದಕ್ಕೂ ಮೈದಾ ಬೇಕು. ಆದರೆ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾವು ತಿನ್ನುವ ಪಿಝ್ಝಾ, ಬರ್ಗರ್,ಬ್ರೆಡ್ ಕೇಕ್ ಎಲ್ಲವೂ ಮೈದಾಮಯವೇ ಆಗಿದ್ದು, ಇದನ್ನು ತಿನ್ನುವ ಮುನ್ನ ಈ ಆರ್ಟಿಕಲ್ ಓದಿ..
ತೂಕ ಹೆಚ್ಚುತ್ತದೆ: ಇದರಲ್ಲಿ ಅತಿ ಹೆಚ್ಚು ಕ್ಯಾಲೋರಿಗಳಿವೆ. ಇದರಿಂದ ಡಯಟ್ ಮಾಡುವವರು ಎಂದಿಗೂ ಮೈದಾ ತಿನ್ನಬೇಡಿ. ಇನ್ನು ಡಯಟ್ ಮಾಡದವರೂ ಕೂಡ ಮೈದಾ ತಿನ್ನುವುದು ಒಳ್ಳೆಯದಲ್ಲ. ಇದು ನಿಮ್ಮ ತೂಕ ಹೆಚ್ಚು ಮಾಡಿ ನಿಮ್ಮನ್ನು ಸ್ಥೂಲಕಾಯರನ್ನಾಗಿ ಮಾಡುತ್ತದೆ.
ಜೀರ್ಣ ಆಗುವುದಿಲ್ಲ: ಮೈದಾ ಬೇಗ ಜೀರ್ಣ ಆಗುವುದಿಲ್ಲ. ಅದರಲ್ಲೂ ರಾತ್ರಿ ಹೊತ್ತು ಮೈದಾ ತಿನ್ನುವುದರಿಂದ ಅದು ಜೀರ್ಣವಾಗುವುದೇ ಇಲ್ಲ ದಿನಗಟ್ಟಲೆ ಅದಕ್ಕೆ ಸಮಯ ಬೇಕಾಗುತ್ತದೆ. ಇದರಲ್ಲಿ ಸ್ವಲ್ಪವೂ ಫೈಬರ್ ಇಲ್ಲದಿರುವುದರಿಂದ ಜೀರ್ಣ ಆಗುವುದು ಕಷ್ಟವಾಗಿ, ಮಲಬದ್ಧತೆ ಆಗುತ್ತದೆ.
ಮಧುಮೇಹಕ್ಕೆ ಕಾರಣ: ಮಧುಮೇಹ ಬರಲು ಒಂದು ಎರಡು ಕಾರಣಗಳಿಲ್ಲ. ಮೈದಾ ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದರಿಂದ ಸಣ್ಣ ವಯಸ್ಸಿಗೆಯೇ ಮಧುಮೇಹದಂತ ಕಾಯಿಲೆಗಳಿಗೆ ತುತ್ತಾಗುತ್ತೀರಿ
ನ್ಯೂಟ್ರಿಯಂಟ್ಸ್‌ಗಳ ಕೊರತೆ: ಇದರಲ್ಲಿ ಯಾವುದೇ ನ್ಯೂಟ್ರಿಯಂಟ್ಸ್‌ಗಳು ಇಲ್ಲ. ಇದು ಹೊಟ್ಟೆ ತುಂಬುತ್ತದೆ. ಆದರೆ ಇದರಿಂದ ಏನೂ ಸಿಗುವುದಿಲ್ಲ. ಬರೀ ತೂಲ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!