Wednesday, August 17, 2022

Latest Posts

ಪಿಡಬ್ಲ್ಯುಡಿ ರಸ್ತೆ ಅಭಿವೃದ್ಧಿಗೆ 7030 ಕೋ.ರೂ. ಅನುದಾನ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ

ಹೊಸ ದಿಗಂತ ವರದಿ, ಧಾರವಾಡ:

ಪ್ರಸಕ್ತ ವರ್ಷ ಮಳೆಯಿಂದ ಹಾನಿಯಾದ ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ ರೂ.7030 ಕೋಟಿ ಅನುದಾನ ಬಂದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು.
ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ವರ್ಷ ಇಲಾಖೆಗೆ ರೂ.10 ಸಾವಿರ ಕೋಟಿ ಅನುದಾನ ಬರುತ್ತಿತ್ತು.
ಈ ವರ್ಷ ರೂ. 7010 ಕೋಟಿ ಮಾತ್ರ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಪ್ರವಾಸ ಮಾಡಿ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿ ವರ್ಗಕ್ಕೆ ಸೂಚಿಸಿದ್ದಾಗಿ ತಿಳಿಸಿದರು.
ಎಸ್.ಎಚ್.ಡಿ.ಪಿನಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರೂ. 25 ಕೋಟಿ ಅನುದಾನದ ಡಿಪಿಆರ್ ತಯಾರಿಕೆಗೆ ಸೂಚಿಸಿದೆ. ರಸ್ತೆ ಆಯ್ಕೆ ಶಾಸಕರಿಗೆ ಬಿಟ್ಟಿದೆ. ಈ ವರ್ಷ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಧಾರವಾಡ ನುಗ್ಗಿಕೇರಿ ಹನುಮಾನ ದೇವಸ್ಥಾನ ಅಭಿವೃದ್ಧಿಗೆ ರೂ.2 ಕೋಟಿ ಟೆಂಡರ್ ಕರೆದಿದೆ. ರೂ.9 ಕೋಟಿ ವೆಚ್ಚದಲ್ಲಿ ಏಸಿ ಆಧಾರಿತ ಜಿ+3 ಹುಬ್ಬಳ್ಳಿ ಬಾರ್ ಅಸೋಸಿಯೇಷನ್ ಬಿಲ್ಡಿಂಗ್ ನಿರ್ಮಿಸಿದೆ. ಶೀಘ್ರವೇ ಬಿಲ್ಡಿಂಗ್ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮೊದಲು!
ಧಾರವಾಡ ಡಿಸಿ ಕಂಪೌಂಡ ಆವರಣದಲ್ಲಿ ಇವಿಎಂ ಮಷೀನ್ ಸಂಗ್ರಹಕ್ಕೆ ರೂ. 4.43 ಕೋಟಿ ವೆಚ್ಚದಲ್ಲಿ 12 ಸಾವಿರ ಮಷೀನ್ ಸಂಗ್ರಹಣಾ ಕೊಠಡಿ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ಎರಡು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ.

ಡಾ.ಅಂಬೇಡ್ಕರ್ ಶಾಲೆ ಅಭಿವೃದ್ಧಿ
1923ರಲ್ಲಿ ಡಾ.ಅಂಬೇಡ್ಕರ್ ಧಾರವಾಡದಲ್ಲಿ ಆರಂಭಿಸಿದ ಶಾಲೆ ಅಭಿವೃದ್ಧಿ ಕಾರ್ಯ ನಡೆದಿದೆ. ರೆಡೆನ್ಸಿ ಸ್ಕೂಲ್, ಹಾಸ್ಟೇಲ್, ಮೈದಾನ ಸೇರಿ ಒಟ್ಟು 32 ಕೋಟಿ ಕೆಲಸ ನಡೆಯಲಿದೆ. ರೂ. 10 ಕೋಟಿ ಕೆಲಸ ಪ್ರಗತಿಯಲ್ಲಿದೆ. ಮೊದಲ ಹಂತ ರೂ. 3 ಕೋಟಿ ಕಾರ್ಯ ಪೂರ್ಣಗೊಂಡಿದೆ. ಎರಡನೇ ಹಂರದ ರೂ.4 ಕೋಟಿ ಕಾರ್ಯ ಪ್ರಗತಿಯಲ್ಲಿದೆ. ಮೂರನೇ ರೂ.3 ಕೋಟಿ ಟೆಂಡರ್ ಪ್ರಕ್ರಿಯೆಯಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!