Thursday, July 7, 2022

Latest Posts

ಪಿಣರಾಯಿ ವಿಜಯನ್ ಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ: ವಿ.ಮುರಳೀಧರನ್

ಕಲ್ಲಿಕೋಟೆ: ತನ್ನ ಕಚೇರಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಮಹಿಳೆಯ ಚಿನ್ನ ಕಳ್ಳ ಸಾಗಾಟ ವಿಚಾರದಲ್ಲಿ ತನಗೆ ಯಾವುದೇ ಮಾಹಿತಿ ಇಲ್ಲವೆಂದು ಹೇಳುತ್ತಿರುವ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸ್ವಂತ ಕಚೇರಿ ಹಾಗೂ ತನ್ನದೇ ಅಧೀನದಲ್ಲಿರುವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಅರಿಯದ ಪಿಣರಾಯಿ ವಿಜಯನ್, ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆಂದು ನುಡಿದರು.
ಎಡರಂಗ ಒಕ್ಕೂಟ ಹಾಗೂ ಸಿಪಿಎಂ ಪಕ್ಷದಲ್ಲಿ ಪಿಣರಾಯಿಯನ್ನು ಒಬ್ಬಂಟಿ ಮಾಡಲಾಗುತ್ತಿದೆ. ಅಷ್ಟಾದರೂ ಅವರು ತನ್ನ ನಡತೆಯನ್ನು ಬದಲಾಯಿಸುತ್ತಿಲ್ಲ. ತಾನು ಹೇಳಿದ್ದೆ ಅಂತಿಮ ಎನ್ನುವ ಮುಖ್ಯಮಂತ್ರಿ ನಿಲುವು ದುರಹಂಕಾರದ ಪ್ರವೃತ್ತಿಯಾಗಿದ್ದು , ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಗೆ ಭೂಷಣವಲ್ಲ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss