ಹೊಸ ದಿಗಂತ ವರದಿ, ಯಾದಗಿರಿ:
ಮಂಗಳವಾರದoದು ನಡೆದ ಗ್ರಾಮ ಪಂಚಯತ ಚುನಾವಣೆಯಲ್ಲಿ ಇಬ್ಬರು ಮತದಾರರಲ್ಲಿ ಕೋವಿಡ್-19 ಸಕಾರಾತ್ಮಕ ಕಂಡು ಬಂದಿದ್ದು ಅವರಿಗೆ ಸಂಜೆ 4ಗಂಟೆಯ ನಂತರದಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹುಣಸಗಿ ತಲೂಕಿನ ಗೆದ್ದಲಮರಿ ಗ್ರಾಮದ ಗ್ರಾಮ ಪಂಚಾಯತಿ ಮತಗಟ್ಟೆ ಸಂಖ್ಯೆ 22ರಲ್ಲಿ ಒಬ್ಬರು, ಹಾಗೂ ಶಹಾಪೂರ ತಾಲೂಕಿನ ಬೀರನೂರು ಗ್ರಾಮ ಪಂಚಾಯತಿಯ ಮತಗಟ್ಟೆ ಸಂಖ್ಯೆ 149 ರಲ್ಲಿ ಒಬ್ಬರಿಗೆ ಕೋವಿಡ್-19ಸಕಾರಾತ್ಮಕ ಕಂಡು ಬಂದಿತ್ತು.
ಈ ಇಬ್ಬರು ಮತದಾರರಿಗೆ ಎಸ್.ಓ.ಪಿ ನಿಯಮಾವಳಿಗಳ ಪ್ರಕಾರ ಕೋವಿಡ್ ಪಿಪಿಇ ಕಿಟ್ ಧರಿಸಿ ಸಂಜೆ ೪ ಗಂಟೆಯ ನಂತರ ಮತದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.