ಬೆಂಗಳೂರು: ಕನ್ನಡ ಮಾದ್ಯಮದಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣದ ಸೈನ್ಸ್ ವಿಭಾಗದಲ್ಲಿ ಸಿಬಿಎಸ್ಸಿ ಪಠ್ಯಕ್ರಮದ ಪಿಸಿಎಂಬಿ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ತಿಳಿಸಿದ್ದಾರೆ.
ಅವರು ಪಿಯು ಇಲಾಖೆಯ ಸಭಾಂಗಣದಲ್ಲಿ ಪಿಯುಸಿಯ ಎನ್ಇಎಸ್ಆರ್ಟಿಯ ನಿರೀಕ್ಷಿತ ಪಿಸಿಎಂಬಿ ಪಠ್ಯಗಳ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಲಾ ವಿಭಾಗದಲ್ಲಿ ಓದುತ್ತಿರುವವರು ಮಾತ್ರ ಕನ್ನಡದಲ್ಲಿ ಬರೆಯುವ ಅವಕಾಶವಿತ್ತು. ಸೈನ್ಸ್ ವಿದ್ಯಾರ್ಥಿಗಳಿಗೆ ಇರಲಿಲ್ಲ. ಅವರಿಗೆ ಇಷ್ಟವಿಲ್ಲದಿದ್ದರು ಇಂಗ್ಲಿಷ್ನಲ್ಲಿಯೇ ಬರೆಯಬೇಕಿತ್ತು.
ಹತ್ತನೇ ತರಗತಿಯವರೆಗೆ ಕನ್ನಡದಲ್ಲಿ ಓದಿ ನಂತರ ಇಂಗ್ಲಿಷ್ನಲ್ಲಿ ಬರೆಯುವುದು ಕಷ್ಟವಾಗುತ್ತಿತ್ತು. ಈಗ ಪಿಸಿಎಂಬಿ ಪುಸ್ತಕಗಳನ್ನು ಕನ್ನಡದಲ್ಲಿ ಬಾಷಾಂತರಿಸಲಾಗಿದೆ.ಇನ್ನು ಮುಂದೆ ಶಿಕ್ಷಕರೂ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೊಧಿಸಬೇಕು ಎಂದರು.