ಜೀರಿಗೆ ಯಾರಿಗೆ ತಾನೇ ಗೊತಿಲ್ಲ. ಇದು ಎಲ್ಲರಿಗೂ ಗೊತ್ತಿರುವಂತದ್ದು. ಸಾಂಬಾರ್ ಬಟ್ಟಲಿನಲ್ಲಿ ಇದಕ್ಕೆ ಪ್ರಧಾನ ಜಾಗ ಜೀರಿಗೆಗೆ. ಏಕೆಂದರೆ ಅಡುಗೆಯ ರುಚಿ ಹೆಚ್ಚಿಸುವಲ್ಲಿ ಜೀರಿಗೆಯ ಪಾತ್ರ ದೊಡ್ಡದಿದೆ. ಕೇವಲ ಅಡುಗೆಯ ರುಚಿ ಮಾತ್ರವಲ್ಲ. ಆರೋಗ್ಯಕರ ಗುಣದಲ್ಲಿಯೂ ಜೀರಿಗೆಯ ಪಾತ್ರ ದೊಡ್ಡದಿದೆ. ಜೀರಿಗೆಯಿಂದ ಆರೋಗ್ಯದಲ್ಲಿ ಏನೆಲ್ಲ ಲಾಭವಿದೆ ಎಂಬುದನ್ನು ಇಲ್ಲಿ ಬರೆದಿದ್ದೇನೆ ನೋಡಿ.
ವಾಯು ಸಮಸ್ಯೆ
ಗ್ಯಾಸ್ ಸಮಸ್ಯೆ ಇರುವವರು ಊಟದ ನಂತರ ಜೀರಿಗೆಯನ್ನು ಸೇವಿಸಿದರೆ ಬೇಗ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಜೀರಿಗೆಯನ್ನು ಸೇವಿಸುವುದು ಕಷ್ಟವಾದರೆ ಜೀರಿಗೆ ಜೀರನ್ನು ಸೇವಿಸಬಹುದು.
ತಲೆನೋವು
ತಡೆಯಲಾದಂತೆ ತಲೆನೋವು ಬಂದರೆ ಜೀರಿಗೆ ಅಕ್ಕಿಯನ್ನು ನೀರಿನಲ್ಲಿ ಒಂದು ತಾಸು ನೆನೆಸಿಡಬೇಕು. ನಂತರ ಅದನ್ನು ಅರೆದು ನೆತ್ತಿಗೆ ಹಚ್ಚಿಕೊಳ್ಳಬೇಕು. ಬೇಗ ತಲೆನೋವು ಕಡಿಮೆ ಆಗುತ್ತದೆ
ಮಾಸಿಕ ಸಮಸ್ಯೆ
ಮಹಿಳೆಯರಿಗೆ ಮಾಸಿಕವಾಗಿ ಆಗುವಂತಹ ಹೊಟ್ಟೆನೋವಿಗೆ ಜೀರಿಗೆ ರಾಮಬಾಣ. ಜೀರಿಗೆಯ ಕಷಾಯ ಮಾಡಿಕೊಂಡು ಅದಕ್ಕೆ ಬೆಣ್ಣೆ ಹಾಕಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ.
ಮೂಲವ್ಯಾಧಿ
ಮೂಲವ್ಯಾಧಿ ಸಮಸ್ಯೆ ಇರುವವರು ಜೀರಿಗೆಯನ್ನು ನೀರಿನಲ್ಲಿ ಅರೆದು ಅದನ್ನು ಹಸಿ ಹಾಲಿಗೆ ಹಾಕಿಕೊಂಡು ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸಬೇಕು. ಒಂದು ವಾರ ಈ ರೀತಿ ಮಾಡುವುದರಿಂದ ಮೂಲವ್ಯಾಧಿ ಕಡಿಮೆ ಆಗುತ್ತದೆ.
ದೇಹದ ಉಷ್ಣತೆ
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ನೀರಿಗೆ ಜೀರಿಗೆಯ ಪುಡಿಯನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಕುದಿಸಿ ದಿನಕ್ಕೆ ಮೂರು ಲೀ. ಜೀರಿಗೆ ನೀರನ್ನು ಕುಡಿದರೆ ದೇಹದ ಉಷ್ಣಾಂಶ ಕಡಿಮೆ ಆಗುತ್ತದೆ.
ಜೀರ್ಣಶಕ್ತಿ
ದಿನವೂ ಜೀರಿಗೆ ಪುಡಿ ಮತ್ತು ತುಪ್ಪವನ್ನು ಬಿಸಿ ಬಿಸಿ ಅನ್ನಕ್ಕೆ ಕಲಸಿಕೊಂಡು ಊಟದ ಕೊನೆಯಲ್ಲಿ ಸೇವಿಸಿದರೆ ತಿಂದಿರುವುದು ಸರಿಯಾಗಿ ಜೀರ್ಣವಾಗುತ್ತದೆ.