ಬ್ರಹ್ಮಾವರ ಕೊಕ್ಕರ್ಣೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ 6ನೇ ತರಗತಿಯ ಕಲ್ಪನಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ರಜಾ ಅವಧಿಯಲ್ಲಿ ದುರದೃಷ್ಟವಶಾತ್ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ಎಲ್ಲಾ ಮಕ್ಕಳಂತೆ ಆಟ ಪಾಠಗಳಲ್ಲಿ ಖುಷಿ ಖುಷಿಯಾಗಿ ಇರಬೇಕಾದ ಮಗುವಿನ ಬಾಳಲ್ಲಿ ಅಂಧಕಾರ ಕವಿದಿದೆ.
ಕೊಕ್ಕರ್ಣೆಯ ಕೊಟಂಬೈಲಿನ ನಂಜೂರು ಬೆಟ್ಟಿ ನಲ್ಲಿ ವಾಸವಾಗಿರುವ ಇವಳ ತಂದೆ ತಾಯಿ ಕೂಲಿ ಕೆಲಸಮಾಡಿ ಕೊಂಡು ಜೀವನ ಸಾಗಿಸುತ್ತಿದ್ದು ಸಾಲಮಾಡಿ ಮಗುವಿಗೆ ಕೆ.ಎಂ.ಸಿ. ಮಣಿಪಾಲದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈಗಾಗಲೇ 1 ಲಕ್ಷದ 30 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ 3 ಲಕ್ಷಕ್ಕೂ ಹೆಚ್ಚು ಹಣ ಬೇಕಾಗುವುದರಿಂದ ಕೂಲಿಮಾಡಿ ಜೀವನ ಸಾಗಿಸುತ್ತಿದ್ದ ಬಡ ತಂದೆ-ತಾಯಿಗಳಿಗೆ ದಿಕ್ಕು ತೋಚದಂತಾಗಿದೆ.
ದಾನಿಗಳು ತಮ್ಮ ಕೈಲಾದಷ್ಟು ಧನಸಹಾಯವನ್ನು ನೀಡಿ ಮಗುವಿನ ಚಿಕಿತ್ಸೆಗೆ ನೆರವಾಗಿ ಈ ಮಗುವು ಬೆಳಕನ್ನು ನೋಡಲು ಸಹಕರಿಸಿ ಪುಟ್ಟಬಾಲೆಯ ಬಾಳಿಗೆ ಬೆಳಕಾಗಬೇಕಾಗಿದೆ. ನೆರವಾಗುವಿರಾ…
ಸಿಂಡಿಕೇಟ್ ಬ್ಯಾಂಕ್ ಕೊಕ್ಕರ್ಣೆ ಶಾಖೆಯ ಮಗುವಿನ ಖಾತೆಗೆ ಜಮಾಮಾಡಬಹುದು. ಕಲ್ಪನಾ ಖಾತೆ ಸಂಖ್ಯೆ 01522200095668 ಐಎಫ್ಎಸ್ಸಿ ಕೋಡ್ SYNB0000152.