ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪುಟ್ಟ ಲವಂಗದ ದೊಡ್ಡ ಶಕ್ತಿ: ಗೊತ್ತಾದ್ರೆ ನೀವು ಟ್ರೈಮಾಡುತ್ತೀರಾ..

ಲಂವಂಗ ಇದ್ದು ನಿನ್ನೆಯಿಂದ ಬಳಕೆಯಲ್ಲಿ ಇರುವಂತದ್ದಲ್ಲ. ಅನಾದಿಕಾಲದಿಂದಲೂ ಬಳಕೆಯಲ್ಲಿ ಇದೆ. ಅಡುಗೆಯಲ್ಲೂ ಇದನ್ನು ಬಳಸುತ್ತಾರೆ, ಔಷಧಿಗಾಗಿಯೂ ಬಳಸುತ್ತಾರೆ. ಮನೆ ಮದ್ದಿನಲ್ಲಿ ಮುಖ್ಯವಾಗಿ ಇದನ್ನು ಬಳಕೆ ಮಾಡುತ್ತಾರೆ. ಹಾಗಾದರೆ‌ ಯಾವ ಯಾವ ಕಾಯಿಲೆಗೆ ಲವಂಗ ಬಳಸುತ್ತಾರೆ ನೋಡೋಣ.
ಹಲ್ಲುನೋವು:ಹಲ್ಲು ನೋವು ಇದ್ದಾಗ ಲವಂಗವನ್ನು ಪುಡಿ ಮಾಡಿ ಹತ್ತಿ ಚೂರಿನಲ್ಲಿ ಲವಂಗದ ಪುಡಿ ಹಾಕಿ ಹಲ್ಲಿನಲ್ಲಿ ಇಟ್ಟುಕೊಳ್ಳಬೇಕು. ಆಗ ಹಲ್ಲು ನೋವು ಕಡಿಮೆ ಆಗುತ್ತದೆ.
ಗಂಟಲು ಕೆರೆತ: ಕೆಲವೊಮ್ಮೆ ಗಂಟಲಿನಲ್ಲಿ ತುಂಬಾ ಕೆರತವಿರುತ್ತದೆ. ಅದರಲ್ಲೂ ನೆಗಡಿ ಆಗುವ ಮುನ್ಸೂಚನೆ ‌ಇದ್ದಾಗ ಗಂಟಲು‌ ಕೆರೆತ ಇರುತ್ತದೆ. ಆಗ ಲವಂಗವನ್ನು ಉಪ್ಪಿನ ಜತೆ ಸೇರಿಸಿಕೊಂಡು ಜಗಿದು ರಸ ಕುಡಿದರೆ ಗಂಟಲು ಕೆರೆತ ಕಡಿಮೆ ಆಗುತ್ತದೆ.
ಅಜೀರ್ಣ: ಅಜೀರ್ಣವಾದಾಗ ಹೊಟ್ಟೆ ತೊಳಸಿದಂತಾದಾಗ ಲವಂಗದ ಕಷಾಯ ಮಾಡಿಕೊಂಡು ಕುಡಿದರೆ ತಕ್ಷಣ ‌ಪರಿಹಾರವಾಗುತ್ತದೆ.
ಬಾಯಿ ದುರ್ಗಂಧ: ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಲವಂಗವನ್ನು ಸೇವಿಸಬೇಕು ದಿನಕ್ಕೆ ಒಂದು ಲವಂಗ ಸೇವಿಸಿದರೂ ಸಾಕು ಬಾಯಿ ದುರ್ಗಂಧ ಕಡಿಮೆ ಆಗುತ್ತದೆ.
ತುರಿಕೆ: ಸೊಳ್ಳೆ ಅಥವಾ ಯಾವುದಾದೂ ಕೀಟಗಳು ಕಚ್ಚಿದಾಗ ತುರಿಕೆ‌ ಇರುತ್ತದೆ. ಆಗ ಲವಂಗದ ಎಣ್ಣೆಯನ್ನು ಮಾಡಿಕೊಂಡು ಹಚ್ಚಿಕೊಂಡರೆ ಕಡಿಮೆ ಆಗುತ್ತದೆ.
ಒತ್ತಡ:ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿದರೆ ದೇಹ ಸಮಸ್ಥಿತಿಯಲ್ಲಿ ಇರುತ್ತದೆ.
ಬ್ಯಾಕ್ಟೀರಿಯಾ ನಾಶ:ಲವಂಗದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಮತ್ತು ಇದು ಸೆಳೆತ, ನಿಶ್ಯಕ್ತಿ ಮತ್ತು ಭೇದಿ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುವುದು. ಲವಂಗದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಇವೆ.
ಸಕ್ಕರೆ ಕಾಯಿಲೆ: ಲವಂಗದಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಎನ್ನುವ ಅಂಶವು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಯಾಕೆಂದರೆ ನೈಜೀರಿಕಿನ್ ಅಂಶವು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳಲು ಕೋಶಗಳ ಸಾಮರ್ಥ್ಯ ಸುಧಾರಿಸುವುದು ಮತ್ತು ಇನ್ಸುಲಿನ್ ಉತ್ಪತ್ತಿ ಮಾಡಲು ದೇಹಕ್ಕೆ ನೆರವಾಗುವುದು.

ನಿತ್ಯ ಒಂದು ಲವಂಗವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss