Saturday, August 13, 2022

Latest Posts

ಪುಣೆ ವಿಮಾನ ನಿಲ್ದಾಣ ತಲುಪಿದ ಕೊರೋನಾ ಲಸಿಕೆ: 13 ಪ್ರದೇಶಗಳಿಗೆ ಕೋವಿಶೀಲ್ಡ್ ರವಾನೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಸಿದ್ಧವಾಗುತ್ತಿದ್ದು, ಇದೀಗ ಸಿರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಮೂರು ಕಂಟೇನರ್‌ಗಳು ಪುಣೆ ತಲುಪಿವೆ.
ತಾಪಮಾನ ನಿಯಂತ್ರಿತ ಮೂರುಟ್ರಕ್‌ಗಳು ಮುಂಜಾನೆ ಐದು ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆ ರವಾನೆಯಾಗುತ್ತದೆ.
ಪುಣಿಯಿಂದ ಕೋವಿಶೀಲ್ಡ್ ಲಸಿಕೆಗಳು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರ ಸೇರಿದಂತೆ 13 ಸ್ಥಳಗಳಿಗೆ ತಲುಪಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss