Wednesday, August 10, 2022

Latest Posts

ಪುತ್ತೂರು- ಕಡಬ ತಾಲೂಕಿನಲ್ಲಿ 9 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಶನಿವಾರ 9 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ನರಿಮೊಗರು ಗ್ರಾಮದ 35 ವರ್ಷದ ಯುವಕ, ಚಿಕ್ಕಮುಡ್ನೂರು ಗ್ರಾಮದ 62 ವರ್ಷದ ಪುರುಷ, ಪುತ್ತೂರು ಪರ್ಲಡ್ಕದ 55 ವರ್ಷದ ಮಹಿಳೆ, 57 ವರ್ಷದ ಮಹಿಳೆ, 22 ವರ್ಷದ ಯುವತಿ, ನೆಲ್ಲಿಕಟ್ಟೆ ನಿವಾಸಿ 53 ವರ್ಷದ ಪುರುಷ, ಪಾಂಗಳಾಯಿ ನಿವಾಸಿ 55 ವರ್ಷದ ಮಹಿಳೆಯಲ್ಲಿ ಕೊರೋನಾ ಪತ್ತೆಯಾಗಿದೆ.
ಕಡಬ ತಾಲೂಕಿನಲ್ಲಿ ಕೊಲ ಗ್ರಾಮದ ಒಂದು ತಿಂಗಳ ಮಗುವಿನಲ್ಲಿ ಕೊರೋನಾ ಪತ್ತೆಯಾಗಿದೆ. ಶಿರಾಡಿ ಗ್ರಾಮದ ಉದನೆ ನಿವಾಸಿ 28 ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 265 ಪ್ರಕರಣಗಳು ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss