Monday, August 8, 2022

Latest Posts

ಪುತ್ತೂರು-ಕಡಬ| 26 ಕೊರೋನಾ ಪ್ರಕರಣಗಳು ದೃಢ

ಪುತ್ತೂರು: ಪುತ್ತೂರು ನಗರದ ಬಸ್ ನಿಲ್ದಾಣದ ಬಳಿ ಇರುವ ಚಿನ್ನಾಭರಣ ಮಳಿಗೆಯ 24, 33, 27, 37 ವರ್ಷದ ನಾಲ್ವರಲ್ಲಿ ಮಂಗಳವಾರ ಕೊರೋನಾ ದೃಢಪಟ್ಟಿದೆ. ನಗರದ ದರ್ಬೆಯ 29, 26, 29 ವರ್ಷದ ಮೂವರು ಯುವಕರು ಹಾಗೂ 36 ವರ್ಷ ಪ್ರಾಯದ ಮಹಿಳೆ, ಕೆಮ್ಮಿಂಜೆಯ 39 ವರ್ಷದ ಮಹಿಳೆ, 28 ವರ್ಷದ ಯುವಕ, 32 ವರ್ಷದ ಯುವಕ, 38 ವರ್ಷದ ಯುವಕನಲ್ಲಿ ಕೊರೋನಾ ಪತ್ತೆಯಾಗಿದೆ.

ಕೂರ್ನಡ್ಕದ 56 ವರ್ಷದ ಮತ್ತು 58 ವರ್ಷದ ಇಬ್ಬರು ಪುರುಷರು, ನರಿಮೊಗರಿನ 51 ವರ್ಷದ ಮಹಿಳೆ, 52 ವರ್ಷದ ಮಹಿಳೆ, ಮಾಡಾವಿನ 53 ವರ್ಷದ ಮಹಿಳೆ, ಶಾಂತಿಗೋಡಿನ 53 ವರ್ಷದ ಮಹಿಳೆ, ಚಿಕ್ಕ ಪುತ್ತೂರಿನ 52 ವರ್ಷದ ಪುರುಷ, ನೆಹರೂನಗರದ 54 ವರ್ಷದ ಪುರುಷ, ಆರ್ಯಾಪಿನ 22 ಮತ್ತು 18 ವರ್ಷದ ಯುವಕನಲ್ಲಿ ಮತ್ತು 42 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.

ಕಡಬ ತಾಲೂಕಿನ ಕುದ್ಮಾರಿನ 64 ವರ್ಷದ ಮಹಿಳೆ, ಗೋಳಿತ್ತೊಟ್ಟಿನ 50 ವರ್ಷದ ಪುರುಷ, ಕೊಂಬಾರಿನ 21 ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಇಲ್ಲಿಯವರೆಗೆ 213 ಪ್ರಕರಣಗಳು ವರದಿಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss