ಪುತ್ತೂರು: ಬನ್ನೂರಿನಲ್ಲಿರುವ ಪತ್ನಿಯ ಮನೆಗೆ ಬಂದ ಕಲ್ಲಂದಡ್ಕ ನಿವಾಸಿಯೊಬ್ಬರಿಗೆ ಕೊರೋನಾ ದೃಢ ಪಟ್ಟಿದೆ. ಇದೀಗ ನಗರಸಭಾ ವ್ಯಾಪ್ತಿಯಲ್ಲೇ 2ನೇ ಪ್ರಕರಣವಾಗಿದೆ.
ತನ್ನ ಪತ್ನಿ ಹೆರಿಗೆಗಾಗಿ ಬನ್ನೂರು ಚೆಲುವಮ್ಮನ ಕಟ್ಟೆ ಬಳಿ ತವರು ಮನೆಯಲ್ಲಿದ್ದ ಹಿನ್ನೆಲೆಯಲ್ಲಿ ಪತ್ನಿ ಮನೆಗೆ ಬಂದಿದ್ದ ಗಂಡನಿಗೆ ಎರಡು ದಿನಗಳ ಹಿಂದೆ ಜ್ವರ, ಶೀತವೆಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಕೋವಿಡ್ ವರದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ವರದಿ ಬಂದಿದ್ದು, ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವ್ಯಕ್ತಿಯ ಪತ್ನಿ ಮತ್ತು ಆಕೆಯ10 ದಿನದ ಮಗುವನ್ನು ಮನೆಯಲ್ಲೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.