Saturday, July 2, 2022

Latest Posts

ಪುನೀತ್ ರಾಜಕುಮಾರ್ ನಿರ್ಮಾಣದ ಲಾ ಸಿನಿಮಾ ಮುಂದಕ್ಕೆ , ಹೊಸ ದಿನಾಂಕ ಘೋಷಣೆ ಮಡಿದ ಚಿತ್ರತಂಡ , ಯಾವಾಗ ಗೊತ್ತಾ ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಣದ ಲಾ ಸಿನಿಮಾ ಒ ಟಿ ಟಿ ಮೂಲಕ ರಿಲೀಸ್ ಆಗಲು ಸಜ್ಜಾಗಿದೆ.ಆನ್ ಲೈನ್ ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಅಲ್ಲದೆ ಕೊರೊನಾ ಲಾಕ್ ಡೌನ್ ನಂತರ ರಿಲೀಸ್ ಆಗುತ್ತಿರುವ ಕನ್ನಡ ಮೊದಲ ಸಿನಿಮಾವಿದು. ಲಾ ಸಿನಿಮಾ ಜೂನ್ 26ಕ್ಕೆ ಒಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಲಾಗಿತ್ತು. ಆದರೆ ಸಿನಿಮಾ ರಿಲೀಸ್ ಬಗ್ಗೆ ಯಾವುದೆ ಮಾಹಿತಿ ನೀಡದೆ ಅಭಿಮಾನಿಗಳಲ್ಲಿ ಗೊಂದಲ ನಿರ್ಮಾಣವಾಗಿತ್ತು. ಸಿನಿಮಾ ರಿಲೀಸ್ ಆಗುತ್ತೋ ಇಲ್ಲವೋ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು.ಕೊನೆಗೂ ಸಿನಿಮಾ ರಿಲೀಸ್ ಬಿಡುಗಡೆಯಾಗೆ ಇಲ್ಲ. ಈಗ ಹೊಸ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಬಗ್ಗೆ ಪುನೀತ್ ರಾಜ್ ಕುಮಾರ್ ಮತ್ತು ಅಮೆಜಾನ್ ಪ್ರೈಮ್ ಹೊಸ ಬಿಡುಗಡೆಯ ದಿನಾಂಕವನ್ನು ಪೋಸ್ಟ್ ಮಾಡಿದ್ದಾರೆ “ಹೊಸ ದಿನಾಂಕ ಸತ್ಯಗಳಿಗೆ ಸಾಕ್ಷಿಯಾಗಲಿದೆ. ಲಾ ಸಿನಿಮಾ ಜುಲೈ 17ಕ್ಕೆ ರಿಲೀಸ್ ಆಗಲಿದೆ” ಎಂದು ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.ಸಿನಿಮಾ ಜೂನ್ 26ಕ್ಕೆ ರಿಲೀಸ್ ಆಗುತ್ತೋ ಇಲ್ಲವೊ ಎನ್ನುವ ಬಗ್ಗೆ ಸ್ಪಷ್ಟಪಡಿಸುವಂತೆ ಅಭಿಮಾನಿಗಳು ಅಮೆಜಾನ್ ಪ್ರೈಮ್ ಗೆ ಟ್ವೀಟ್ ಮಾಡಿ ಕೇಳುತ್ತಿದ್ದರು. ಅಮೆಜಾನ್ ಪ್ರೈಮ್ ಟ್ವೀಟ್ ಮಾಡಿ ಸಿನಿಮಾ ಅಂದುಕೊಂಡ ದಿನಕ್ಕೆ ಅಂದರೆ ಜೂನ್ 26ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಕೊನೆಗೆ ಹೊಸ ದಿನಾಂಕವನ್ನು ಅಪ್ ಡೇಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss