Sunday, April 11, 2021

Latest Posts

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ದಸರಾ ಹಬಕ್ಕೆ ಚಿತ್ರತಂಡದಿಂದ ಸರ್ಪ್ರೈಸ್

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿಸಿ ಇದೀಗ ಜೇಮ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೇಮ್ಸ್ ಚಿತ್ರೀಕರಣದಲ್ಲಿರುವ ಅಪ್ಪುಮತ್ತು ತಂಡದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನೂ ಯುವರತ್ನ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು.ಆದರೆ ಕೊರೊನಾ ವೈರಸ್ ನಿಂದ ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ಮುಂದಕ್ಕೆ ಹೋಗಿದೆ. ಇದೀಗ ಅಭಿಮಾನಿಗಳು ಚಿತ್ರದ ಹಾಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಹಾಡುಗಳು ಬಿಡುಗಡೆಯಾಗುವ ಮೊದಲೇ ಚಿತ್ರದಿಂದ ಮತ್ತೊಂದು ಲುಕ್ ರಿವೀಲ್ ಮಾಡುವುದಾಗಿ ಅನೌನ್ಸ್ ಮಾಡಿದೆ.

ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡುವುದಾಗಿಯೂ ಸಿನಿಮಾ ತಂಡ ಹೇಳಿತ್ತು. ಆದರೀಗ ಹಾಡುಗಳು ಬಿಡುಗಡೆಯಾಗುವ ಮೊದಲೇ ಚಿತ್ರದಿಂದ ಮತ್ತೊಂದು ಲುಕ್ ರಿವೀಲ್ ಮಾಡಲು ನಿರ್ಧರಿಸಿದೆ. ಹೌದು, ಯುವರತ್ನ ತಂಡ ಪವರ್ ಸ್ಟಾರ್ ಗಡ್ಡ ಬಿಟ್ಟಿರುವ ಹೊಸ ಲುಕ್ ಅನ್ನು ದಸರಾ ಹಬ್ಬಕ್ಕೆ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಕೊಡಲು ನಿರ್ಧರಿಸಿದೆ.

ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಡ್ಡ ಬಿಟ್ಟಿರುವ ಲುಕ್ ಅನ್ನು ದಸರಾಗೆ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಪ್ಪು ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss