Monday, September 21, 2020
Monday, September 21, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಪುರಾಣ ಕಥೆಗಳ ಆಧಾರಿತ ಬಂಧಗಳ ಬಂಧನ ರಕ್ಷಾ ಬಂಧನ

sharing is caring...!

ಅಣ್ಣ ತಂಗಿಯರ ಈ ಬಂಧ, ಜನುಮ‌ ಜನುಮಗಳ‌‌ ಅನುಬಂಧ, ಎಂದು ಹಂಸಲೇಖರವರು ಅಣ್ಣ ತಂಗಿ ಬಾಂಧವ್ಯವನ್ನು ಚಂದಗೆ ಪದಗಳಲ್ಲಿ ಪೊಣಿಸಿದ್ದಾರೆ. ಅದು ವರ್ಣನೆಗೆ ನಿಲುಕದ್ದು.

ಸಹೋದರ ಸಹೋದರಿಯರ ಬಾಂಧವ್ಯವೇ ಹಾಗೆ ‍ಅದು ವರ್ಣನೆಗೆ ಮೀರಿದ್ದು.‌ ಒಬ್ಬ ಹುಡುಗನನ್ನು ತಾಯಿಯಂತೆ‌ ಪ್ರೀತಿಸುವವಳು ಸಹೋದರಿ ಮಾತ್ರಾ. ಗೆದ್ದಾಗ ಬೆನ್ನು ತಟ್ಟುತ್ತಾಳೆ, ಸೋತಾಗ ಮಡಿಲು ಕೊಟ್ಟು ಸಾಂತ್ವನ ಮಾಡುತ್ತಾಳೆ. ಅವನ ಮನಸ್ಸಿನ ತೊಳಲಾಟವನ್ನು ಸ್ನೇಹಿತೆಯಾಗಿ ಹಂಚಿಕೊಳ್ಳುತ್ತಾಳೆ. ಕುಸಿದಾಗ ಸ್ಪೂರ್ತಿ ತುಂಬಿ ಬದುಕನ್ನು ಬದುಕುವಂತೆ‌ ಮಾಡುತ್ತಾಳೆ. ತನ್ನ ಸಹೋದರನಿಗಾಗಿ ಯಾವುದೇ ಅಪೇಕ್ಷೆಗಳಿಲ್ಲದೆ ಎಲ್ಲಾ ಪಾತ್ರಗಳನ್ನು ಒಬ್ಬಳೆ ನಿರ್ವಹಿಸುತ್ತಾಳೆ.

ಹುಡುಗಿಯರಿಗೂ ಅಷ್ಟೇ ಸಹೋದರನೆಂದರೆ ಅದೆಂತಹದೋ ಭದ್ರತಾ ಭಾವ, ಅಪರೂಪದ ಮಾರ್ಗದರ್ಶಕ, ತಿಂಡಿಯಲ್ಲಿ ಪಾಲು ಕೇಳುವ ಕಿರಾತಕ. ಸಹೋದರ ಸಹೋದರಿಯರ ಭಾಂದವ್ಯವೇ ಹಾಗೇ ಅಲ್ಲಿ ಮೊಗೆದಷ್ಟು ಪ್ರೀತಿ, ಕಿತ್ತಾಟ, ಹೊಟ್ಟೆಕಿಚ್ಚು, ತುಂಟಾಟ, ಕೀಟಲೇ ಇದ್ದದ್ದೆ. ಇಂತಹ ಅಪರೂಪದ ಭಾಂದವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ.

ಪ್ರತಿವರ್ಷ ಶ್ರಾವಣ ಮಾಸದ ನೂಲ ಹುಣ್ಣಿಮೆಯ ದಿನ ರಕ್ಷಾಬಂಧನವನ್ನು ಆಚರಿಸುತ್ತಾರೆ. ಅಂದು ಹೆಣ್ಣುಮಕ್ಕಳಿಗೆ ರಾಖಿ ಕಟ್ಟುವ ಸಂಭ್ರಮವಾದರೆ, ಗಂಡುಮಕ್ಕಳಿಗೆ ತನ್ನ ಮುದ್ದಿನ ಸಹೋದರಿಗೆ ಉಡುಗೊರೆಗಳನ್ನು ಕೊಟ್ಟು ಅವಳನ್ನು ಸಂತೋಷ ಪಡಿಸುವ ಭಾವುಕತೆಯ ಕ್ಷಣಗಳು ಇನ್ನೊಂದೆಡೆ.

ರಕ್ಷಾಬಂಧನದ ದಿನ ಹೆಣ್ಣುಮಕ್ಕಳು ಬೆಳಿಗ್ಗೆ ಬೇಗನೆ ಎದ್ದು ಹೊಸ ವಸ್ತ್ರ ಧರಿಸಿ, ರಾಖಿಗೆ ಪೂಜೆ ಮಾಡುತ್ತಾರೆ. ತನ್ನ ಸಹೋದರನ ಹಣೆಗೆ ಕುಂಕುಮವಿಟ್ಟು ಅಕ್ಷತೆ ಹಾಕಿ,‌‌ ಆರತಿ ಮಾಡಿ, ಬಣ್ಣ ಬಣ್ಣದ ರಾಖಿಯನ್ನು ಕಟ್ಟುತ್ತಾರೆ. ಸಿಹಿ ತಿನ್ನಿಸಿ ಅವರ ಬದುಕಲ್ಲಿ ಯಾವಾಗಲೂ ಸಿಹಿ ತುಂಬಿರಲೆಂದು ಹಾರೈಸುತ್ತಾರೆ. ಅಂದು ಪ್ರತಿ ಸಹೋದರನು ತನ್ನ ಸಹೋದರಿಯ ಜವಬ್ದಾರಿಯನ್ನು‌ ಹೊತ್ತುಕೊಳ್ಳುತ್ತೇನೆಂದು, ಅವಳಿಗೆ ರಕ್ಷಾ ಕವಚವಾಗಿ ಇರುತ್ತೇನೆಂದು ಪ್ರತಿಜ್ಞೆ ಮಾಡಿದಂತೆ.

ನಮ್ಮದು ಭಾರತೀಯ ಸಂಸ್ಕೃತಿ. ಪ್ರತಿ ಹಬ್ಬಗಳಿಗೂ ಒಂದೊಂದು‌ ಐತಿಹ್ಯವಿದೆ. ರಕ್ಷಾ ಬಂಧನಕ್ಕೂ ಅದರದೇ ಆದ ಇತಿಹಾಸ ನಾವು ನೋಡಬಹುದು. ಹಿಂದೂ ಪೌರಾಣಿಕ ಕತೆಗಳಲ್ಲಿ ನೋಡಿದರೆ, ಹಿಂದೆ ದೇವತೆಗಳು ಮತ್ತು ರಾಕ್ಷಕರ ನಡುವೆ ಘೋರ ಯುದ್ಧ ನಡೆದಾಗಲೆಲ್ಲ ಕವಿಚಕ್ರವರ್ತಿಯು ವಿಜಯ ‌ಸಾಧಿಸುತ್ತಲೇ ಇರುತ್ತಾನೆ. ಆಗ ಇಂದ್ರನ ಪತ್ನಿ ಶಚಿದೇವಿಯು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾಳೆ. ವಿಷ್ಣುವು ಹತ್ತಿಯ ದಾರದಿಂದ ಕೂಡಿದ ರಕ್ಷಾದಾರವನ್ನು ಶಚಿದೇವಿಗೆ ಕೊಟ್ಟು, ಇದನ್ನು ಇಂದ್ರನ ಕೈಗೆ ಕಟ್ಟುವಂತೆ ಹೇಳುತ್ತಾನೆ. ಅವರ ಮಾತಿನಂತೆಯೇ ಪತಿಯ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರನು ವಿಜಯ ಸಾಧಿಸಿ ಅಮರಾವತಿಯನ್ನು ಮರಳಿ ಪಡೆಯುತ್ತಾನೆ. ಈ ಕತೆಯನ್ನು ಗಮನಿಸಿದರೆ ರಕ್ಷಾ ಬಂಧನ ಕೇವಲ ಅಣ್ಣ ತಂಗಿಯರಿಗೆ ಸಂಬಂಧಿಸಿದ್ದಲ್ಲ. ತಮ್ಮ ಪ್ರಿತಿ ಪಾತ್ರರ ರಕ್ಷಣೆ ಬಯಸುವವರು ಅವರಿಗೆ ರಕ್ಷೆಕಟ್ಟುತ್ತಿದ್ದರು.ಅಮ್ಮ ಮಗನಿಗೆ, ಗುರು ಶಿಷ್ಯನಿಗೆ, ಹೆಂಡತಿ ಗಂಡನಿಗೆ. ಆದರೆ ಕಾಲ ಕ್ರಮೇಣ ಈ ಹಬ್ಬ ಕೇವಲ ಸಹೋದರ ಸಹೋದರಿಯರಿಗೆ ಸಂಬಂಧಿಸಿದ್ದು ಎಂಬಂತಾಗಿದೆ.

ರಕ್ಷಾ ಬಂಧನದ ಹಿಂದೆ ಮಹಾಭಾರತದ ಪ್ರಸಂಗವೊಂದಿದೆ. ಶ್ರೀಕೃಷ್ಣನು ತನ್ನ ಮಾವನಾದ ಶಿಶುಪಾಲನನ್ನು ಸಂಹರಿಸಲು ತನ್ನ ಶ್ರೀಚಕ್ರ ಕಳುಹಿಸಿದ್ದ, ಅದು ಹಿಂತಿರುಗುವಾಗ ಅವನ ಬೆರಳುಗೆ ಗಾಯವಾಗಿ ರಕ್ತ ಸುರಿಯುತ್ತದೆ. ಅಲ್ಲೆ ಇದ್ದ ದ್ರೌಪತಿ ತನ್ನ ಸೀರೆ ಅಂಚನ್ನು‌ಹರಿದು ಬೆರಳಿಗೆ ಸುತ್ತುತ್ತಾಳೆ.‌ಆಗ ಕೃಷ್ಣ ದ್ರೌಪದಿಗೆ‌‌ ಅನವರತ ರಕ್ಷಣೆ ಕೊಡುವುದಾಗಿ ಮಾತು ಕೊಡುತ್ತಾನೆ. ಅಷ್ಟೇ ಅಲ್ಲದೇ‌‌ ಭೂ ಲೋಕದಲ್ಲಿ ಯಾರು ಈ ದಿನದಂದು ತಮ್ಮ‌ ಸಹೋದರಿಯರ ಬಳಿ ನೂಲಿನ ದಾರವನ್ನು ಕೈಗೆ ಕಟ್ಟಿಸಿ ಕೊಂಡು ಅವರಿಗೆ ರಕ್ಷಣೆ ಕೊಡುತ್ತಾರೊ ಅವರಿಗೆ ತಾನು ರಕ್ಷಕನಾಗಿ ಇರುತ್ತೇನೆಂದು ವರ ನೀಡುತ್ತಾನೆ. ಪಾಂಡವರು ಪಗಡೆ ಆಟದಲ್ಲಿ ಸೋತು ದ್ರೌಪದಿಯ ವಸ್ರ್ತಪಹರಣವಾಗುತ್ತಿದ್ದಾಗ,‌ ಕೃಷ್ಣ ಅಕ್ಷಯ ಸೀರೆಯನ್ನು ದಯಪಾಲಿಸುತ್ತಾನೆ. ಹಾಗೆ ನೋಡಿದರೆ ದ್ರೌಪದಿಯ ಅಣ್ಣ ದುಷ್ಠದ್ಯುಮ್ನ ಕೃಷ್ಣನಿಗೂ ದ್ರೌಪದಿಗೂ ರಕ್ತ ಸಂಬಂದವಿಲ್ಲ. ಇದು ಭಾವನಾತ್ಮಕ ‌ಸಂಬಂಧ.

ಈ ಹಬ್ಬವನ್ನು ಜನಜಾಗ್ರತಿಗೆ, ಎಲ್ಲ ಧರ್ಮ, ಜಾತಿ ಜನರನ್ನು ಒಂದೆಡೆಗೆ ಸೇರಿಸಿ, ನಾವೆಲ್ಲ‌ಒಂದು, ನಾವೆಲ್ಲ ಭಾರತೀಯರು ಎಂಬ ಭಾವನೆ ಬರುವಂತೆ ಆಚರಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ರಕ್ಷಾ ಬಂಧನವನ್ನು ಆಚರಿಸುತ್ತದೆ. ಪರಸ್ಪರ ರಕ್ತ ಸಂಬಂಧದ ಇರದೇ ಗಂಡು ಹೆಣ್ಣಿನ ಉನ್ನತ ಬೆಸುಗೆಯೇ ಈ ರಕ್ಷಾ ಬಂಧನ.

ರಕ್ಷಾ ಬಂಧನ ಬರಿ ಒಂದು ಆಚರಣೆಯಲ್ಲ, ಸಂಬಂಧ ವನ್ನು ಬೆಸೆಯುವ, ಭರವಸೆಯ‌ ಆಶಾಕಿರಣವನ್ನು ಮೂಡಿಸಿ,‌ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ರೂಢಿಸಿ ಕೊಟ್ಟ ಜವಾಬ್ದಾರಿ ಕೆಲಸ‌. ಸಂಬಂಧಗಳ ಬೆಲೆ‌ ಕಳೆದು ಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಕ್ಷಾಬಂಧನ ಎಲ್ಲರ ನಡುವೆ ಭ್ರಾತೃತ್ವ ಬೆಸೆಯಲಿ.

-ಕಾವ್ಯಾ ಜಕ್ಕೊಳ್ಳಿ

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!